ಊರಿಗೋಗೋರಿಗೆ ಇಂದು ಮತ್ತು ನಾಳೆ ಹೆಚ್ಚಿನ ಬಸ್

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನತೆ ರಾಜಧಾನಿಯನ್ನು ತೊರೆದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಅದರಲ್ಲೂ ಬುಧುವಾರದಿಂದ ಒಂದು ವರದ ವರೆಗೆ ಬೆಂಗಳೂರು ಲಾಕ್ ಡೌನ್ ಆಗುತ್ತಿರುವುದರಿಂದ ಅನೇಕ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚುವರಿ ಬಸ್ ಗಳನ್ನೂ ವ್ಯವಸ್ಥೆ ಮಾಡಿದೆ. ಹೌದು. ಇಂದು ಮತ್ತು ನಾಳೆ ತಲಾ ೮೦೦ ಬಸ್ ಗಳನ್ನೂ ಇತರೆ ಸ್ಥಳಗಳಿಗೆ ಹೆಚ್ಚುವರಿಯಾಗಿ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ.

ಈಗಾಗಲೇ ಇಂದು ಬೆಳಿಗ್ಗೆ 10 ಗಂಟೆಯವರೆಗೆ 249 ಬಸ್ಸುಗಳನ್ನುಬೆಂಗಳೂರಿನಿಂದ ಕಾರ್ಯಚರಣೆಗೊಳಿಸಿದ್ದು, 6641 ಪ್ರಯಾಣಿಕರು ಈಗಾಗಲೇ ಪ್ರಯಾಣಿಸಿರುತ್ತಾರೆ. ಈಗಾಗಲೇ 231 ಬಸ್ಸುಗಳು ಇಂದು ಮುಂಗಡ ಬುಕ್ಕಿಂಗ್ ಆಗಿದ್ದು, ಸಾಮಾಜಿಕ ಅಂತರ ಕಾಪಾಡಿ, ಪ್ರತಿಯೊಬ್ಬ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಇದಲ್ಲದೆ, ಸರ್ಕಾರ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದು, ಯಾವುದೇ ರೀತಿ ಆತಂಕಕ್ಕೆ ಒಳಗಾಗಬೇಡಿ ಎಂದು ತಿಳಿಸಿದೆ.

Add Comment