ಮಾದರಿ ಕೆಸಲ ಮಾಡಿದ ಸಚಿವ ಕೆ.ಗೋಪಾಲಯ್ಯ

ನಗರದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ, ಬೆಡ್ ಗಳ ಕೊರತೆ ಹೆಚ್ಚಾಗುತ್ತಿದೆ. ಹೀಗಾಗಿ ತಮ್ಮ ತಮ್ಮ ಕ್ಷೇತ್ರದ ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಪ್ರಿಸ್ಟೀನ್ ಆಸ್ಪತ್ರೆಯಲ್ಲಿ ಇಂದು 150 ಬೆಡ್ ಗಳನ್ನ ನಿಯೋಜನೆ ಮಾಡಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿದೆ. ಜೊತೆಗೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕೋವಿಡ್ 19 ಕೋರೋನ ಪಾಸಿಟಿವ್ ಕೇಸುಗಳ ಸಮರ್ಪಕ ಚಿಕಿತ್ಸೆಗಾಗಿ ಸುಮಾರು 250 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯುವ ಹಾಗು ಸೋಂಕು ನಿವಾರಕ ಸಿಂಪಡಿಸುವ ವಿನೂತನ ವಾಹನ ಸಿದ್ಧತೆಯಾಗಿದೆ. ಆಹಾರ ಸಚಿವ ಹಾಗು ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯ ರವರ ನೇತೃತ್ವದಲ್ಲಿ, ಪ್ರಾಥಮಿಕ ಹಾಗು ಪ್ರೌಢಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಕೋವಿಡ್ ವಾರ್ಡ್ ಉದ್ಘಾಟಿಸಿದರು.

ಇನ್ನು ಈ ಸಮಯದಲ್ಲಿ ಲಾಕ್ ಡೌನ್ ಬಗ್ಗೆ ಮಾತನಾಡಿದ ಸಚಿವ ಶ್ರೀ ಸುರೇಶ್ ಕುಮಾರ್ ಸರ್ಕಾರದ ಶ್ರಮದ ಬಗ್ಗೆ ತಿಳಿಸಿದರು. ಇಂದು ಸಿಎಂ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮಾಡಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈಗ ಬೆಂಗಳೂರಲ್ಲಿ ಮಾಡಿರುವ ಲಾಕ್ ಡೌನ್ ಎರಡನೇ ಹಂತದ್ದಾಗಿದ್ದು, ಈ ಚೈನ್ ಕಟ್ ಮಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಈ ಸಲುವಾಗಿ ಹತ್ತು ವರ್ಷದ ಮಕ್ಕಳು, ಎಪ್ಪತ್ತು ವರ್ಷ ದಾಟಿದವರು ಮನೆಯಲ್ಲೇ ಇದ್ದು ಸಹಕಾರ ನೀಡಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿಕೊಂಡರು.

Add Comment