ಲಾಲ್ ಬಾಗ್ ನಲ್ಲಿ ಜನವರಿ 19 ರಿಂದ 29 ರವರೆಗೆ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನ

0

ಬೆಂಗಳೂರು: ಬೆಂಗಳೂರಿನ ಲಾಲ್‌ಬಾಗ್ ನಲ್ಲಿ ಜನವರಿ 19 ರಿಂದ 29 ರವರೆಗೆ ಗಣರಾಜ್ಯೋತ್ಸವದ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲು ಸಿದ್ಧವಾಗಿದೆ. ಇದು ವಾರ್ಷಿಕ ಪ್ರದರ್ಶನದ 213ನೇ ಆವೃತ್ತಿಯಾಗಿದ್ದು, ಲಾಲ್‌ಬಾಗ್‌ ಉದ್ಯಾನವನದ ಗ್ಲಾಸ್ ಹೌಸ್‌ನಲ್ಲಿ ಹೂವುಗಳನ್ನು ಅಲಂಕರಿಸಲಾಗುತ್ತದೆ.

ತೀರಾ ಇತ್ತೀಚೆಗೆ ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಅಂತರದ ನಂತರ ಕಳೆದ ವರ್ಷ ಆಗಸ್ಟ್‌ನಲ್ಲಿ ಲಾಲ್‌ಬಾಗ್ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿತ್ತು.

ಲಾಲ್‌ಬಾಗ್‌ ಗ್ಲಾಸ್ ಹೌಸ್‌ನಲ್ಲಿ ಜನವರಿ 19ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳುವ 10 ದಿನಗಳ ಫಲಪುಷ್ಪ ಪ್ರದರ್ಶನವು ಸಾಮಾನ್ಯವಾಗಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಜನಪ್ರಿಯ ಲಾಲ್‌ಬಾಗ್‌ ಪುಷ್ಟಪ್ರದರ್ಶನಕ್ಕೆ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪುಷ್ಟ ಪ್ರದರ್ಶನವನ್ನು ನೋಡಲು ಲಾಲ್‌ಬಾಗ್ ಸಂದರ್ಶಕರಿಗೆ ಪ್ರವೇಶ ಶುಲ್ಕವನ್ನು ವಿಧಿಸುತ್ತಿದೆ.

About Author

Leave a Reply

Your email address will not be published. Required fields are marked *

You may have missed