ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0

ತ್ತರ ಕನ್ನಡ,( ಶಿರಸಿ) ಜನವರಿ 15:ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಮಗ್ರವಾಗಿ ಪರಿಸರ ಅಧ್ಯಯನ ಮಾಡುವ ಪರಿಸರ ವಿಶ್ವವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಶಿರಸಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಅರಣ್ಯ ಹಾಗೂ ತೋಟಗಾರಿಕೆ ಕಾಲೇಜುಗಳು ಇಲ್ಲಿರುವುದರಿಂದ ಇವೆರಡನ್ನೂ ಸಂಯೋಜಿಸಿ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯತೆ, ವನ್ಯಜೀವಿ ರಕ್ಷಣೆ, ಜನರ ಅಭಿವೃದ್ಧಿ, ಪರಿಸರ ಸಮತೋಲನ ಮಾಡುವ ಹಿನ್ನೆಲೆಯಲ್ಲಿ ಪರಿಸರ ವಿಶ್ವವಿದ್ಯಾಲಯವನ್ನು ಇಲ್ಲಿ ಸ್ಥಾಪಿಸುವುದು ಸೂಕ್ತ ಎಂದು ಭಾವಿಸಲಾಗಿದೆ ಎಂದರು

ಸಂಯೋಜಿತ ವಿಶ್ವವಿದ್ಯಾಲಯ
ಪರಿಸರ ವಿಶ್ವವಿದ್ಯಾಲಯದ ಜೊತೆಗೆ ಕಲಾ, ವಿಜ್ಞಾನ, ವಾಣಿಜ್ಯ ಮುಂತಾದ ಸಾಮಾನ್ಯ ಕಲಿಕೆಗೂ ಅವಕಾಶ ಕಲ್ಪಿಸಲಾಗುವುದು. ಸಂಯೋಜಿತ ವಿಶ್ವವಿದ್ಯಾಲಯದ ಇದಾಗಲಿದೆ. ವಿಶೇಷವಾಗಿ ಪರಿಸರದ ಬಗ್ಗೆ ಕೆಲಸ ಮಾಡಲಿದೆ. ಬರುವ ಬಜೆಟ್ ನಲ್ಲಿ ಅದಕ್ಕೆ ಅನುದಾನ ನೀಡಲಾಗುವುದು. ಈ ಭಾಗದ ಜನರಿಗೆ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದರು.

ಒಕ್ಕಲೆಬ್ಬಿಸುವುದಿಲ್ಲ
ಅಭಿವೃದ್ಧಿ ಜೊತೆಗೆ ಅರಣ್ಯ ಪ್ರದೇಶ ಹೆಚ್ಚಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು. ವಿಶೇಷವಾಗಿ ಇಲ್ಲಿ ಪ್ರವಾಹ, ಅಭಿವೃದ್ಧಿ ಯೋಜನೆ ನೀಡುವಾಗ ಅರಣ್ಯ ವಾಸಿಗಳ ಸಮಸ್ಯೆ ಎದುರಾಗುತ್ತಿದೆ. ಕಾನೂನಿನಲ್ಲಿ ಹಲವಾರು ಸಮಸ್ಯೆಗಳಿವೆ. ಪ್ರವಾಹ ಉಂಟಾದಾಗ ಅರಣ್ಯ ವಾಸಿಗಳಿಗೆ ಪರಿಹಾರ ನೀಡಿದ್ದೇವೆ. ಮನೆಯನ್ನು ಸಹ ನೀಡಿದ್ದೇವೆ. ತಲ ತಲಾಂತರದಿಂದ ನೆಲೆಸಿ, ಸಾಗುವಳಿ ಮಾಡಿರುವ ಅರಣ್ಯ ವಾಸಿಗಳ ಸಮಸ್ಯೆ ಸುಪ್ರೀಂಕೋರ್ಟ್ ನಲ್ಲಿ ಇದ್ದರೂ ಕೂಡ ಎಲ್ಲಾ ರಾಜ್ಯ ಗಳಲ್ಲಿ ಈ ಸಮಸ್ಯೆ ಇದೆ.

ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಮೂರು ತಲೆಮಾರುಗಳನ್ನು ತೆಗೆದುಕೊಳ್ಳುವ ಬದಲು ಒಂದೇ ತಲೆಮಾರನ್ನು ತೆಗೆದುಕೊಂಡು ಅರಣ್ಯ ವಾಸಿಗಳೆಂದು ನಿರ್ಣಯ ಮಾಡಿ ಹಕ್ಕುಪತ್ರಗಳನ್ನು ನೀಡಲು ವ್ಯವಸ್ಥೆ ಮಾಡಲು ರಾಜ್ಯದ ಅಭಿಪ್ರಾಯವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಅದರ ಕೆಲಸ ವಾಗುತ್ತದೆ. ಕನ್ನಡ ನಾಡಿನ ಅರಣ್ಯವಾಸಿಗಳಿಗೆ ಯಾವುದೇ ಕಾರಣಕ್ಕೂ ಒಕ್ಕಲು ಎಬ್ಬಿಸುವ ಕೆಲಸ ವನ್ನು ರಾಜ್ಯ ಸರ್ಕಾರ ಮಾಡುವುದಿಲ್ಲ. ಈ ಬಗ್ಗೆ ಸ್ಪಷ್ಟವಾಗಿ ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ಸೂಚನೆ ನೀಡಲಾಗಿದೆ. ಯಾರೂ ಆತಂಕ ಪಡುವ ಪ್ರಶ್ನೆಯೇ ಇಲ್ಲ. ಎಲ್ಲಿಯೂ ಅವರಿಗೆ ತೊಂದರೆ ಮಾಡುವ ಪ್ರಶ್ನೆ ಇಲ್ಲ ಎಂದರು.

About Author

Leave a Reply

Your email address will not be published. Required fields are marked *

You may have missed