೯ ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ದೇಶದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕಿತರ ಸಂಖ್ಯೆ ೯ ಲಕ್ಷ ಗಡಿ ದಾಟಿದೆ. ದೇಶದಲ್ಲಿ ಬರೋಬ್ಬರಿ 9,06,752ಕ್ಕೆ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 28,498 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ 3,11,565 ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ ಜುಲೈ 1ರಿಂದ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2 ರಿಂದ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ 3 ರಿಂದ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 4 ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 9ರಿಂದ 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹಾಗೂ ಜುಲೈ 11ರಂದು 28 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಇದೇ ಟ್ರೆಂಡ್ ಮುಂದುವರೆದಿದ್ದು ಸೋಮವಾರ 28,498 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 9,06,752ಕ್ಕೆ ಏರಿಕೆಯಾಗಿದೆ.

ಭಾನುವಾರ 29,271 ಹೊಸ ಪ್ರಕರಣಗಳು ದೃಢವಾಗಿತ್ತು. ಪ್ರತಿ ಸೋಮವಾರ ಹೊಸ ಪ್ರಕರಣ ಸಂಖ್ಯೆ ಪತ್ತೆ ಇಳಿಮುಖವಾಗುವಂತೆ ಈ ವಾರವೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿತ್ತು. ಉಳಿದಂತೆ ಮಹಾರಾಷ್ಟ್ರ 6497, ದೆಹಲಿ 1246, ಉತ್ತರ ಪ್ರದೇಶದಲ್ಲಿ 1664, ಗುಜರಾತ್ 902, ಮಧ್ಯ ಪ್ರದೇಶ 575, ಪಂಜಾಬ್ 357, ಛತ್ತೀಸ್‍ಗಢ 184, ಆಂಧ್ರ ಪ್ರದೇಶ 1935, ತೆಲಂಗಾಣ 1550 ಹೊಸ ಪ್ರಕರಣಗಳು ಸೋಮವಾರ ವರದಿಯಾಗಿತ್ತು. ತಮಿಳುನಾಡಿನಲ್ಲಿ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ.

Add Comment