ಕೊರೋನಾ ಮಧ್ಯೆ ಪಾರ್ಟಿ-ಶ್ರೀರಾಮುಲು ಆಪ್ತ ಅಮಾನತು

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ತಿಳಿಸುತ್ತಿದೆ. ಜೊತೆಗೆ ಅನೇಕ ನಿಯಮಗಳನ್ನು ಹೇರಿದೆ. ಆದರೆ ನಿಯಮ ಮೀರಿ, ನೂರಾರು ಜನರನ್ನು ಸೇರಿಸಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದ ಸಚಿವ ಶ್ರೀರಾಮುಲು ಆಪ್ತ ಎಸ್‌.ಎಚ್‌. ಶಿವನಗೌಡರ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಆದೇಶ ಹೊರಡಿಸಿದ್ದಾರೆ. ಇಡೀ ದೇಶವೇ ಮಹಾಮಾರಿ ಕೊರೋನಾ ವಿರುದ್ಧ ಹೋರಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಪಕ್ಷದ ಸೂಚನೆಯಂತೆ ನಿರಂತರವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಪಕ್ಷದ ಜವಾಬ್ದಾರಿಯುತ ಕಾರ್ಯಕರ್ತರಾಗಿ ಹುಟ್ಟುಹಬ್ಬದ ನಿಮಿತ್ತ ಗದಗ ನಗರದ ರಿಂಗ್‌ರೋಡ್‌ನಲ್ಲಿರುವ ಶ್ರೀನಿವಾಸ್‌ ಭವನದಲ್ಲಿ ನೂರಾರು ಆಪ್ತರೊಂದಿಗೆ ಹಾಗೂ ಹಾಗೂ ಸ್ನೇಹಿತರೊಂದಿಗೆ ಮೋಜು, ಮಸ್ತಿ ಮಾಡಿದ್ದಾರೆ. ಈ ಬಗ್ಗೆ ರಾಜ್ಯದೆಲ್ಲೆಡೆ ಸುದ್ದಿಯಾಗಿದ್ದು, ತಕ್ಷಣವೇ ಅವರನ್ನು ಅಮಾನತು ಮಾಡಬೇಕೆಂದು ಕೆಲವರು ಸೂಚಿಸಿದ್ದು, ಅವರ ಮಾತಿನಂತೆ ಶಿವನಗೌಡರನ್ನು ಅಮಾನತುಗೊಳಿಸಲಾಗಿದೆ.

Add Comment