ಅಫ್ ಜಲ್ ಪುರ ತಾಲ್ಲೂಕಿನ ಬಿದನೂರು ಗ್ರಾ.ಪಂ.ಯಲ್ಲಿ ನರೇಗಾ ಹಗರಣ…

ಕಲಬುರಗಿ ಜಿಲ್ಲೆಯ ಅಫ್ ಜಲ್ ಪುರ ತಾಲ್ಲೂಕಿನ ಬಿದನೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಹೋಲ್ಡರ್ ಗಳ ಹೆಸರುಗಳನ್ನು ಹಾಜರಾತಿಯಲ್ಲಿ ತೋರಿಸಿ ಕೆಲಸಕ್ಕೆ ಬರದಿದ್ದರೂ ಅವರ ಹೆಸರುಗಳಲ್ಲಿ ಕಾಮಗಾರಿ ನಡೆದಿದೆ ಎಂದು ಸುಳ್ಳು ಲೆಕ್ಕ ತೋರಿಸಿ ಬಿಲ್ ಹಣ ಗುಳುಂ ಮಾಡಿರುವ ಹಗರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ವೀರಕನ್ನಡಿಗರ ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿ ಕಲಬುರಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಹಗರಣದಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್, ತಾಲ್ಲೂಕು ಪಂಚಾಯಿತಿ ಅಧಿಕಾರಿ, ಪಿಡಿಓ ಮತ್ತು ಕೂಲಿಕಾರರ ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರು ಭಾಗಿಯಾಗಿರುವುದರಿಂದ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ವೀರಕನ್ನಡಿಗರ ಕನ್ನಡಿಗರ ಸೇನೆಯ ಕಲಬುರಗಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿತು.

ಕೆ ಟಿವಿ ನ್ಯೂಸ್ ಕಲಬುರಗಿ

 

Add Comment