ಅವಹೇಳನಾಕಾರಿ ಫೇಸ್ ಬುಕ್ ಪೋಸ್ಟ್ ಹಾಕಿರುವ ನವೀನ್ ತಲೆ ಕಡಿಯುವರಿಗೆ 51 ಲಕ್ಷ ರೂ.!

ಬೆಂಗಳೂರಿನ ಡಿ.ಜೆ‌.ಹಳ್ಳಿ- ಕೆ.ಜಿ.ಹಳ್ಳಿ ಗಲಭೆಗೆ ಕಾರಣವಾಗಿರುವ ಬೆಂಗಳೂರಿನ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಫೇಸ್ ಬುಕ್ ಪೋಸ್ಟ್ ಇದೀಗ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದೆ.  ನವೀನ್ ಫೇಸ್ ಬುಕ್ ನಲ್ಲಿ ಹಾಕಿರುವ ವಿವಾದಾತ್ಮಕ ಪೋಸ್ಟ್ ನೋಡಿ ರೊಚ್ಚಿಗೆದ್ದ ಉತ್ತರಪ್ರದೇಶದ ಮೀರತ್ ನ ಅಲ್ಪಸಂಖ್ಯಾತ ಮುಖಂಡ ಶಜೇಬ್ ರಿಜ್ವಿ ಎಂಬಾತ ನವೀನ್ ತಲೆ ಕಡಿದು ತೆಗೆದುಕೊಂಡು ಬಂದವರಿಗೆ 51 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭರ್ಜರಿ ಆಫರ್ ನೀಡಿದ್ದಾರೆ.

ಶಜೇಬ್ ರಿಜ್ವಿ ಈ ಹಿಂದೆ ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದರು.

ಕೆ ಟಿವಿ ನ್ಯೂಸ್ ಲಖ್ನೋ

Add Comment