ಬೆಂಗಳೂರಿನಲ್ಲಿ ಸೈಬರ್ ಚೋರರ ಹಾವಳಿ: ಒಂದೇ ತಿಂಗಳಲ್ಲಿ 1228 ಪ್ರಕರಣ ದಾಖಲು

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ಚೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದೇ ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ ಈ ಎಲ್ಲಾ ಪ್ರಕರಣಗಳ ತನಿಖೆಗೆ ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಉಪ ವಿಭಾಗದ ಮಟ್ಟದಲ್ಲಿ ಸೆನ್ ಠಾಣೆಗಳನ್ನ ತೆರಯಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ.

 

ಈ ಎಲ್ಲಾ ಕಾರಣಗಳಿಂದ ಸರಿಯಾದ ತನಿಖೆ ನಡೆಯದೆ ದಾಖಲಾದ ಅಷ್ಟೂ ಪ್ರಕರಣಗಳು ಅತಂತ್ರವಾಗುತ್ತಿವೆ. ವರ್ಷದ ಮೊದಲ ತಿಂಗಳಲ್ಲೇ ಬೆಂಗಳೂರಿನಲ್ಲಿ ಸೈಬರ್ ಖದೀಮರು ಹೆಚ್ಚು ಕೈಚಳಕ ತೋರಿದ್ದು, ವಿವಿಧ ಠಾಣೆಗಳಲ್ಲಿ ಒಟ್ಟು 1228 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷವೂ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಈಗ ವರ್ಷದ ಮೊದಲ ತಿಂಗಳಲ್ಲೇ ಸೈಬರ್ ಚೋರರು ಆರ್ಭಟಿಸಲು ಆರಂಭಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed