ಬಾಕಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ: ಶಾಸಕ ಬಂಡೆಪ್ಪ ಖಾಶೆಂಪುರ್

0

ಬೀದರ್: ನನ್ನ ಕ್ಷೇತ್ರದ ಕೆಲವೇ ಕೆಲವು ತಾಂಡಗಳನ್ನು ಈಗ ಕಂದಾಯ ಗ್ರಾಮಗಳೆಂದು ಸರ್ಕಾರ ಘೋಷಣೆ ಮಾಡಿದೆ. ಅದರಂತಯೇ ಇನ್ನೂ ಬಾಕಿ ಉಳಿದಿರುವ ತಾಂಡಗಳನ್ನು ಆದಷ್ಟು ಬೇಗ ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಿ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸದನದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.

 

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಬಜೆಟ್ ಅಧಿವೇಶನದ ಏಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ಕಂದಾಯ ಗ್ರಾಮಗಳಿಗೆ ಸಂಬಂಧಿಸಿದಂತೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಮಾತನಾಡಿದ ಅವರು, ಕಂದಾಯ ಗ್ರಾಮಗಳಿಗೆ ಸಂಬಂಧಿಸಿದಂತೆ ನಾನು ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿರುವ ಉತ್ತರ ಸರಿಯಾಗಿಲ್ಲ ಎಂದರು.

ನನ್ನ ಕ್ಷೇತ್ರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಸರ್ಕಾರ ನೀಡಿದ ಉತ್ತರದಲ್ಲಿ 12 ತಾಂಡಗಳ ಪೈಕಿ 08 ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದಿವಿ. ಇನ್ನೂ 04 ಬಾಕಿ ಉಳಿದಿವೆ ಎಂದು ತಿಳಿಸಲಾಗಿದೆ. ಬಗದಲ್ ತಾಂಡಗಳಿಗೆ ಸಂಬಂಧಿಸಿದಂತೆ ಎ ತಾಂಡವನ್ನು ಕಂದಾಯ ಗ್ರಾಮವನ್ನಾಗಿ ಮಾಡಲಾಗಿದೆ. ಆದರೇ ಬಿ ತಾಂಡ ಬಾಕಿ ಇದೆ. ಇನ್ನೂ ವಿಠಲಪೂರ ಅನ್ನು ತಾಂಡ ಎಂದು ಉತ್ತರದಲ್ಲಿ ಹೇಳಲಾಗಿದೆ. ಆದರೇ ಅದು ತಾಂಡವಲ್ಲ ಗ್ರಾಮವಾಗಿದೆ.

ಸರ್ಕಾರ ನೀಡಿದ ಪಟ್ಟಿಯಲ್ಲಿಯೇ ಚಿಟಗುಪ್ಪಾ ಮತ್ತು ಬೀದರ್ ಎರಡು ತಾಲೂಕಿನಲ್ಲಿ 23 ತಾಂಡಗಳು ಬರುತ್ತವೆ. ಈ ಪಟ್ಟಿಯ ಪ್ರಕಾರವೇ ಇನ್ನೂ 11 ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕಾಗಿದೆ. ಹಕ್ಕು ಪತ್ರ ವಿತರಣೆ ಮಾಡಿದಂತೆ ನಿವೇಷನಗಳ ವಿಷಯಕ್ಕೂ ಮಹತ್ವ ನೀಡಬೇಕಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬಂಡೆಪ್ಪರವರು ಸರ್ಕಾರದ ಉತ್ತರ ತೃಪ್ತಿ ತಂದಿಲ್ಲ ಎಂದಿದ್ದಾರೆ. ನಮ್ಮ ಮಾನದಂಡಗಳಿಗೆ ಒಳಪಡುವ ತಾಂಡಗಳು ಬಾಕಿ ಇದ್ದರೆ ಈ ತಿಂಗಳೊಳಗೆ ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕ್ರಮವಹಿಸುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ರವರು ಉತ್ತರದಲ್ಲಿ ತಿಳಿಸಿದರು.

About Author

Leave a Reply

Your email address will not be published. Required fields are marked *

You may have missed