ಕೋರ್ಟ್ ಮೆಟ್ಟಿಲೇರಿದ IAS ಅಧಿಕಾರಿ ರೋಹಿಣಿ ಸಿಂಧೂರಿ..!

0

ಬೆಂಗಳೂರು: ಐಪಿಎಸ್ ರೂಪಾ.ಡಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವಾಕ್ ಸಮರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ರೋಹಿಣಿ ಸಿಂ‍ಧೂರಿ ಡಿ.ರೂಪಾ ವಿರುದ್ಧ ಕೋರ್ಟ್ ಮೊರೆಹೋಗಿದ್ದಾರೆ. ರೂಪಾ ಅವರು ನನ್ನ ಖಾಸಗಿ ಮೊಬೈಲ್ ನಂಬರ್ , ಫೋಟೋ, ವಿಳಾಸವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

 

ಇದರಿಂದ ಅಪರಿಚಿತರು ನನಗೆ ಕರೆ ಮಾಡಿ ತೊಂದರೆ ನೀಡುತ್ತಿದ್ದಾರೆ.ಇದರಿಂದ ನನ್ನ ವೈಯಕ್ತಿಕ ವಿಚಾರಕ್ಕೆ ಧಕ್ಕೆಯಾಗುತ್ತಿದೆ. ಆದ್ದರಿಂದ . ಡಿ ರೂಪಾ ವಿರುದ್ಧ ‘ ನಿರ್ಬಂಧಕಾಜ್ಞೆ’ ವಿಧಿಸುವಂತೆ ರೋಹಿಣಿ ಸಿಂಧೂರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಾನೂನು ಚೌಕಟ್ಟು ಮೀರಿ ರೂಪಾ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಂಧೂರಿ ಪರ ವಕೀಲರು ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಕೋರ್ಟ್ ನಾಳೆ ಏನು ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ರೋಹಿಣಿ ಸಿಂಧೂರಿಯ ಮೊಬೈಲ್ ಹ್ಯಾಕ್ ಮಾಡಿ ಫೋಟೋಗಳನ್ನ ಪಡೆದು ವೈರಲ್ ಮಾಡಿ ಮಾನ ಕಳೆದಿದ್ದಾರೆ ಅಂತಾ ರೋಹಿಣಿ ಪತಿ ದೂರು ನೀಡಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ಪೊಲೀಸರು ಇದುವರೆಗೂ ಕ್ರಮ ಕೈಗೊಂಡಿಲ್ಲ ಈ ಹಿನ್ನೆಲೆ ರೋಹಿಣಿ ಕುಟುಂಬ ವಕೀಲರನ್ನ ಸಂಪರ್ಕಿಸಿ ಕೋರ್ಟ್ ಮೊರೆ ಹೋಗಿದೆ ಎನ್ನಲಾಗಿದೆ. ನಾನು ಕಾನೂನು ಚೌಕಟ್ಟು ಮೀರಿಲ್ಲ, ಆದರೆ ರೂಪಾ ಅವರು ಕಾನೂನು ಚೌಕಟ್ಟು ಮೀರಿದ್ದಾರೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲೂ ಪ್ರತಿವಾದಿಸಿಯನ್ನಾಗಿಸಿದ್ದಾರೆ ಎಂದು ರೋಹಿಣಿ ಆರೋಪಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed