ದೇಶಸೇವೆಗೆ ಹೊರಟ್ಟಿದ್ದವನ ಮನೆಯಲ್ಲಿ ಸೂತಕದ ಛಾಯೆ

0

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಅಗ್ನಿಪತ್ ಯೋಜನೆಗೆ ಆಯ್ಕೆಗೊಂಡು ತರಬೇತಿಗೆ ಹೋಗುವ ಮಾರ್ಗಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಐವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಬಹಳ ಆಸೆಗಳನ್ನು ಇಟ್ಟುಕೊಂಡು ಹೊರಟ್ಟಿದ್ದ ಯುವಕನ ಮನೆಯಲ್ಲಿ ಇದೀಗ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಈ ಕುರಿತು ಒಂದು ವರದಿ‌ ಇಲ್ಲಿದೆ ನೋಡಿ.

ಹೌದು! ಆತ ಹಗಲುರಾತ್ರಿ‌ ಎನ್ನದೇ ಕಠಿಣ ಪರಿಶ್ರಮದೊಂದಿಗೆ ದೇಶಸೇವೆ ಅಣಿಯಾಗಬೇಕು ಅಂತಾ ಕನಸು ಕಂಡಿದ್ದ. ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ತರಬೇತಿಗೆ ಹೊರಟಿದ್ದ ಮಗನ ಕನಸಿಗೆ ಧ್ವನಿಯಾಗಿದ್ದ ಕುಟುಂಬಸ್ಥರು ಕೂಡ ಮಗ ಸೈನಿಕನಾಗಲು ಬೇಕಾಗದ ಪ್ರೋತ್ಸಾಹ ನೀಡಿ ಚೆನ್ನಾಗಿ ಬೆಳೆಸಿದ್ದರು. ಅದರಂತೆ ಮಗ ಕೂಡ ಕಠಿಣ ಪರಿಶ್ರಮದಿಂದ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆ ಆಗಿದ್ದ.ಹೀಗೆ ಸಂಭ್ರಮದಿಂದ ಮಗನನ್ನು ಬೀಳ್ಕೊಡಲು ಹೋಗುತ್ತಿದ್ದ ಐವರು ಮಸಣ ಸೇರಿದ್ರೆ ದೇಶ ಕಾಯಬೇಕಿದ್ದವ ಆಸ್ಪತ್ರೆ ‌ಪಾಲಾಗಿದ್ದಾನೆ. ಹಾಗಾದ್ರೆ‌ ಈ ಮನಕಲಕುವ ಘಟನೆ ನಡೆದಿದೆ.. ಚಿಕ್ಕವಯಸ್ಸಿನಲ್ಲೇ ಸತತ ಪರಿಶ್ರಮದಿಂದ ಕೇಂದ್ರ ಸರ್ಕಾರದ ಅಗ್ನಿಪತ್ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆ ಆಗಿದ್ದ ಮಗನನ್ನು ಸಂಭ್ರಮದಿಂದ ‌ಬೀಳ್ಕೊಡಲು ಸ್ನೇಹಿತರು ಕುಟುಂಬಸ್ಥರು ಜತೆಗೂಡಿ ಹೋಗುತ್ತಿದ್ದ ಕಾರು ಅಪಘಾತವಾಗಿ ಪಾದಚಾರಿ ಸೇರಿ ಐವರು ಸಾವನ್ನಪ್ಪಿದ್ದಾರೆ. ಧಾರವಾಡ ತಾಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ‌ ಘಟನೆ ನಡೆದಿದ್ದು ಲಾರಿ ಹಾಗೂ ಕಾರ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ವರ್ಷದ ಮಗು ಸೇರಿ ಒಟ್ಟು ಐದು ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ.

About Author

Leave a Reply

Your email address will not be published. Required fields are marked *

You may have missed