ವಯನಾಡಿನಲ್ಲಿ ಬೆಚ್ಚಿಬಿದ್ದ ರಾಹುಲ್ – ಕಾಂಗ್ರೆಸ್ ಗೆ ಶಾಕ್!

1 Star2 Stars3 Stars4 Stars5 Stars (No Ratings Yet)
Loading...
ವಯನಾಡ್: ಇದಪ್ಪಾ ವರಸೆ ಅನ್ನೋದು. ಕೇರಳದ ವಯನಾಡ್ ನಲ್ಲಿ ಸುಲಭವಾಗಿ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗ ಶಾಕ್ ಆಗಿದ್ದಾರೆ. ಪ್ರತಿಪಕ್ಷಗಳು ಹೆಣೆದಿರೋ ತಂತ್ರಗಾರಿಕೆಗೆ ಕಾಂಗ್ರೆಸ್ ಬೆಚ್ಚಿಬಿದ್ದಿದೆ. ನಾಮಪತ್ರ ಸಲ್ಲಿಸಿ ಖುಷಿಯಿಂದಲೇ ದಿಲ್ಲಿ ತಲುಪಿದ್ದ ರಾಹುಲ್ ಗೆ   ಸಂಜೆ ಬಂದಿರೋ ರಿಪೋರ್ಟ್ ನೋಡಿ ಎದೆ ಧಸಕ್  ಎಂದಿದೆ.
 ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಮೂವರು ಸುಮಲತಾ ಎಂಬ ಹೆಸರಿನ ಮಹಿಳೆಯರು ಸ್ಪರ್ಧಿಸಿದ್ದಾರೆ . ಕಾಂಗ್ರೆಸ್ ನಾಯಕರೇ ಜೆಡಿಎಸ್ ಗೆ ಈ ತಂತ್ರ ಸೂಚಿಸಿದ್ದರು ಎನ್ನುವ ಮಾತುಗಳಿವೆ. ಈಗ ಇದೇ  ತಂತ್ರ ಕಾಂಗ್ರೆಸ್ ವಿರುದ್ಧವೇ ಪ್ರಯೋಗವಾಗಿದೆ. ಖುದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಈ ತಂತ್ರದ ಬಿಸಿ ಅನುಭವಿಸ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೂ ಎದುರಾಗಿದ್ದು ಇಂತಹದ್ದೇ ಗೊಂದಲ ಎದುರಾಗಿದೆ, ವಯನಾಡಿನಲ್ಲಿ ರಾಹುಲ್ ಗಾಂಧಿ ಹೆಸರಿನ ಮತ್ತೆ ಇಬ್ಬರು ವ್ಯಕ್ತಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಮೇಥಿ ಜತೆಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರ ಸಂಕಷ್ಟಗಳಿಗೆ ಕೊನೆ ಮೊದಲಿಲ್ಲದಂತಾಗಿದೆ. ಒಂದೆಡೆ ಬಿಜೆಪಿ ವಯನಾಡಿನಲ್ಲೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ. ಇನ್ನೊಂದೆಡೆ ಸೌರ ಹಗರಣದ ಪ್ರಮುಖ ಆರೋಪಿ ಸರಿತಾ ಎಸ್​ ನಾಯರ್​ ಪೈಪೋಟಿಯೊಡ್ಡಲು ಮುಂದಾಗಿದ್ದಾರೆ. ಇದೆಲ್ಲದರ ಮಧ್ಯೆ ರಾಹುಲ್​ ಗಾಂಧಿ ಹೆಸರಿನ ಮತ್ತಿಬ್ಬರು ವ್ಯಕ್ತಿಗಳ ಸ್ಪರ್ಧೆಯನ್ನೂ ಕಾಂಗ್ರೆಸ್​ ಅಧ್ಯಕ್ಷ ಎದುರಿಸಬೇಕಾಗಿ ಬಂದಿದೆ.
ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ವಯನಾಡಿನಿಂದ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆ ಇನ್ನಿಬ್ಬರು ರಾಹುಲ್​ ಗಾಂಧಿಗಳು ಕೂಡ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರು. ಅದರಂತೆ ಅವರು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಗುರುವಾರ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೇರಳ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಎರುಮೆಲೆ ನಿವಾಸಿ ರಾಹುಲ್​ ಗಾಂಧಿ ಕೆ.ಇ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಂತೆಯೇ ಅಖಿಲ ಭಾರತ ಮಕ್ಕಳ್​ ಕಚ್ಚಿಯ ರಾಹುಲ್​ ಗಾಂಧಿ ಕೆ. ಎಂಬುವವರೂ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

 

Add Comment