ಮತ್ತೊಬ್ಬ ಡ್ರಗ್ಸ್ ಪೆಡ್ಲರ್ ಪ್ರತೀಕ್ ಶೆಟ್ಟಿ ಅರೆಸ್ಟ್

ಕಳೆದ 2018ರಲ್ಲಿ ನಡೆದಿದ್ದ ಬೆಂಗಳೂರಿನ ಬಾಣಸವಾಡಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಶುಕ್ರವಾರ ಆರೋಪಿ ಪ್ರತೀಕ್ ಶೆಟ್ಟಿಯನ್ನು ಬಂಧಿಸಿದ್ದಾರೆ.
30 ವರ್ಷದ ಬಂಧಿತ ಪ್ರತೀಕ್ ಶೆಟ್ಟಿ ಸಹ ಓರ್ವ ಡ್ರಗ್ಸ್ ಪೆಡ್ಲರ್ ಎಂದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಲು ಬಂಧಿಸಿದ್ದಾರೆ ಎನ್ನಲಾಗಿದೆ.
ಮೊದಲು ಮಂಗಳೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಪ್ರತೀಕ್ ಶೆಟ್ಟಿ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ ಕಾಲೇಜು ದಿನಗಳಲ್ಲಿ ಸೇವಿಸುತ್ತಿದ್ದ ಡ್ರಗ್ಸ್ ಅನ್ನು ಬಿಡದೆ ಸೇವಿಸಿದ ಕಾರಣ ಪ್ರತೀಕ್ ಶೆಟ್ಟಿ ಅದೇ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದ.‌ ಅಲ್ಲದೆ 2018ರಲ್ಲಿ ನಡೆದಿದ್ದ ಬಾಣಸವಾಡಿ ಡ್ರಗ್ಸ್ ಹಗರಣದಲ್ಲಿ ಆರೋಪಿಯಾಗಿದ್ದ ಪ್ರತೀಕ್ ಶೆಟ್ಟಿ ಈಗಲೂ ಡ್ರಗ್ಸ್ ಪೆಡ್ಲರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment