ಹನುಮಂತನ ಮುಂದೆ ದೇಹಪ್ರದರ್ಶನ ಮಾಡಿದ ಯುವತಿಯರು..! ಕಾಂಗ್ರೆಸ್ ನಿಂದ ಗಂಗಾಜಲ ಹಾಕಿ ಶುದ್ಧಿ

0

ಭೋಪಾಲ್: ಹನುಮಂತನ (Hanuman) ಚಿತ್ರದ ಎದುರೇ ಬಿಕಿನಿ (Bikini) ತೊಟ್ಟು ಮಹಿಳೆಯರ ದೇಹದಾಢ್ಯ ಸ್ಪರ್ಧೆ (Women Bodybuilding Competition) ನಡೆಸಲಾಗಿದ್ದು, ಬಳಿಕ ವಿವಾದ ಭುಗಿಲೆದ್ದಿದೆ. ಈ ಬಗ್ಗೆ ರಾಜಕೀಯ ಪಕ್ಷಗಳು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿವೆ.

ಮಧ್ಯಪ್ರದೇಶದ (Madhya Pradesh) ರತ್ಲಾಮ್‌ನಲ್ಲಿ ನಡೆದ ದೇಹದಾರ್ಢ್ಯ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ದೇಹದಾರ್ಢ್ಯ ಪಟುಗಳು ಭಗವಾನ್ ಹನುಮಂತನ ಚಿತ್ರದ ಎದುರು ಬಿಕಿನಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಘಟನೆ ಬಳಿಕ ಕಿಡಿ ಕಾರಿರುವ ಕಾಂಗ್ರೆಸ್ (Congress), ಈ ಕಾರ್ಯಕ್ರಮ ಹಿಂದೂ (Hindu) ಭಾವನೆಗಳಿಗೆ ನೋವುಂಟು ಮಾಡಿದೆ. ಇದು ದೇವರಿಗೆ ಮಾಡಿರುವ ಅವಮಾನ, ಈ ಕೂಡಲೇ ಕಾರ್ಯಕ್ರಮದ ಆಯೋಜಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.

ಈ ನಡುವೆ ಸಮಾಜವಾದಿ ಪಕ್ಷವೂ ಕೂಡಾ ಈ ಕಾರ್ಯಕ್ರಮ ಹಿಂದೂ ದೇವರಿಗೆ ಅವಮಾನ ಮಾಡಿದೆ ಎಂದು ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ವರದಿಗಳ ಪ್ರಕಾರ ಮಾರ್ಚ್ 4 ಮತ್ತು 5 ರಂದು ನಡೆದ 13 ನೇ ಮಿಸ್ಟರ್ ಜೂನಿಯರ್ ದೇಹದಾರ್ಢ್ಯ ಸ್ಪರ್ಧೆಯನ್ನು ರತ್ಲಾಮ್‌ನ ಮೇಯರ್ (ಬಿಜೆಪಿ) ಪ್ರಹ್ಲಾದ್ ಪಟೇಲ್ ಆಯೋಜಿಸಿದ್ದರು. ಇದರಲ್ಲಿ ರಾಜ್ಯ ಶಿಕ್ಷಣ ಸಚಿವ ಮೋಹನ್ ಯಾದವ್ ಭಾಗವಹಿಸಿದ್ದರು. ಮಹಿಳಾ ದೇಹದಾರ್ಢ್ಯ ಪಟುಗಳು ಹನುಮಂತನ ಚಿತ್ರದ ಮುಂದೆ ಪೋಸ್ ಕೊಟ್ಟಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದಾದ ಬಳಿಕ ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯ್ದಿವೆ.

About Author

Leave a Reply

Your email address will not be published. Required fields are marked *

You may have missed