ಮೋದಿ ಬಗ್ಗೆ ಜಮೀರ್ ಬಾಯಲ್ಲಿ ಇದೆಂಥಾ ಮಾತು?

 

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಮುಖ ನೋಡಿ ತಮಗೆ ಮತ ನೀಡಿ ಎಂದು ರಾಜ್ಯ ಬಿಜೆಪಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಮೋದಿ ಮುಖ ಸರಿ ಇಲ್ಲದ್ದಕ್ಕೆ ಪತ್ನಿಯೇ ಅವರನ್ನು ಬಿಟ್ಟಿದ್ದಾರೆ. ಈಗ ಪತ್ನಿ ಬಿಟ್ಟವರ ಮುಖ ನೋಡಿ ನಾವು ಮತ ನೀಡಬೇಕೇ ಎಂದು ಸಚಿವ ಜಮೀರ್ ಅಹ್ಮದ್‍ಖಾನ್ ಪ್ರಶ್ನೆ ಮಾಡಿದ್ದಾರೆ.

ಹಾವೇರಿಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ನನ್ನ ಮುಖ ನೋಡಿ ಬೇಡಿ, ಮೋದಿ ಮುಖ ನೋಡಿ ಮತ ನೀಡಿ ಎಂದು ಪ್ರಚಾರ ನಡೆಸುತ್ತಾರೆ. ಅದ್ದರಿಂದ ಅವರು ಬುರ್ಖಾ ಧರಿಸಿ ಪ್ರಚಾರ ನಡೆಸುವುದು ಉತ್ತಮ. ಅಲ್ಲದೇ ಹೆಂಡತಿಯೇ  ಮುಖ ಸರಿ ಇಲ್ಲ ಎಂದು ಮೋದಿ ಅವರನ್ನು ಬಿಟ್ಟಿದ್ದಾರೆ. ಅವರ ಮುಖ ನೋಡಿ ನಾವು ಮತ ಹಾಕಬೇಕಾ? ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳಬೇಡಿ. ನಿಮ್ಮ ಸಾಧನೆ ಹೇಳಿಕೊಂಡು ಮತ ಕೇಳಿ ಎಂದರು.

Add Comment