ಲಾಂಗಿನಿಂದ ಮಹಿಳೆ ಮೇಲೆ ಹಲ್ಲೆ –ಬೆಚ್ಚಿಬಿದ್ದ ಬೆಂಗಳೂರು

 

ನೆಲಮಂಗಲ : ರಾಜಧಾನಿ ಬೆಂಗಳೂರು ಮತ್ತೆ ಬೆಚ್ಚಿಬಿದ್ದಿದೆ. ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಗಳು ಮನಸೋಯಿಚ್ಚೆ ಹಲ್ಲೆ ನಡೆಸಿದ್ದಾರೆ. ನೆಲಮಂಗಲದ ಚಿಕ್ಕಬಿದರಕಲ್ಲು ಗ್ರಾಮದಲ್ಲಿ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳು ಗಂಗಮ್ಮ ಮತ್ತು ಅವರ ಜೊತೆಗಿದ್ದ ಮತ್ತೊಬ್ಬರ ಮೇಲೆ ಲಾಂಗಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ಮಹಿಳೆಯನ್ನು ಅಟ್ಟಾಡಿಸಿ ಹಲ್ಲೆ ಮಾಡಲಾಗಿದೆ. ಈ ದೃಶ್ಯಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.  ಮಾದನಾಯಕನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Video thumbnail: Bangalore murder attempt2

 

Video thumbnail: Bangalore murder attempt

 

Add Comment