RRR ಸಿನಿಮಾದ ನಾಟು-ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ..!

0

ಗತ್ತೇ ಕಾಯುತ್ತಿದ್ದ ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿಗಳು ಘೋಷಣೆಯಾಗಿದ್ದು, ಭಾರತವನ್ನು ಪ್ರತಿನಿಧಿಸಿದ್ದ ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ (Natu Natu) ಹಾಡಿಗೆ (Song) ಆಸ್ಕರ್ ಪ್ರಶಸ್ತಿ ಬಂದಿದೆ. ರಾಜಮೌಳಿ (Rajamouli) ನಿರ್ದೇಶನದಲ್ಲಿ ಮೂಡಿ ಬಂದ ಆರ್.ಆರ್.ಆರ್ ಚಿತ್ರದ ಈ ಹಾಡು ಆಸ್ಕರ್ ತರುವ ಭರವಸೆಯನ್ನೂ ಮೂಡಿಸಿತ್ತು.

ಆಸ್ಕರ್ ವೇದಿಕೆಯ ಮೇಲೆ ಈ ಹಾಡನ್ನು ಗಾಯಕರಾದ ಸಿಪ್ಲಿಗಂಜ ಹಾಗೂ ಕಾಲಭೈರವ ಹಾಡಿದ್ದರು. ಅಮೆರಿಕಾದ ನಟ, ಡಾನ್ಸರ್ ಲಾರೆನ್ ಗೋತ್ಲಿಬ್ ನೃತ್ಯ ಮಾಡಿದ್ದರು.

ನಾಟು ನಾಟು ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಸಭಾಂಗಣದ ತುಂಬಾ ಚೆಪ್ಪಾಳೆಯದ್ದೇ ಸದ್ದು. ಭಾರತದಲ್ಲೂ ರಾಮ್ ಚರಣ್ (Ram Charan) ಮತ್ತು ಜ್ಯೂನಿಯರ್ (Jr NTR) ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಶುಭಾಶಯ ಕೋರಿದ್ದಾರೆ. ಅದರಲ್ಲೂ ತೆಲುಗು ಸಿನಿಮಾ ರಂಗದಲ್ಲಿ ಹಬ್ಬದ ವಾತಾವರಣವೇ ಕಂಡು ಬಂದಿದೆ.

About Author

Leave a Reply

Your email address will not be published. Required fields are marked *

You may have missed