ಅಕ್ಟೋಬರ್ 6ರವರೆಗೆ ರಿಯಾಗೆ ನ್ಯಾಯಾಂಗ ಬಂಧನ

ನಟಿ ರಿಯಾ ಚಕ್ರವರ್ತಿ ಹಾಗೂ ಶೌವಿಕ್ ಚಕ್ರವರ್ತಿಯನ್ನು ಅಕ್ಟೋಬರ್ ೬ರ ವರೆಗೆ ನ್ಯಾಯಾಂಗ ಬಂಧನ ಮುಂದುವರೆಸುವಂತೆ ಮುಂಬೈನ ಎನ್‌ಡಿಸಿಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ. ಈಗಾಗಲೇ 14 ದಿನಗಳ ಮುಂಬೈನ ಬೈಖುಲ್ಲಾ ಜೈಲಿನಲ್ಲಿರುವ ರಿಯಾ ಸೆರೆವಾಸ ಮುಂದುವರಿಯಲಿದೆ. ಎನ್‍ಸಿಬಿ ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿಯನ್ನ ಸೆಪ್ಟೆಂಬರ್ 8ರಂದು ಬಂಧಿಸಲಾಗಿತ್ತು. ನ್ಯಾಯಾಲಯ ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ರಿಯಾ ಮತ್ತು ಅವರ ಸೋದರ ಶೌವಿಕ್ ಚಕ್ರವರ್ತಿ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಆದ್ರೆ ಇದಕ್ಕೂ ಮೊದಲು ಸೆಪ್ಟೆಂಬರ್ 11ರಂದು ಮುಂಬೈನ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ರಿಯಾ, ಶೌವಿಕ್ ಸೇರಿದಂತೆ ನಾಲ್ವರ ಜಾಮೀನು ಅರ್ಜಿಯನ್ನ ವಜಾಗೊಳಿಸಿತ್ತು. ಈ ಪ್ರಕರಣದ ಜಾಮೀನು ಅರ್ಜಿ ನಾಳೆ ಬಾಂಬೆ ಹೈಕೋರ್ಟ್ ಮುಂದೆ ಬರಲಿದೆ.

Add Comment