ವಿಧಾನಮಂಡಲ ಅಧಿವೇಶನದ 2ನೇ ದಿನ 10ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ

ರಾಜ್ಯದ ವಿಧಾನಮಂಡಲ ಅಧಿವೇಶನದ ಎರಡನೇ ದಿನವಾದ ಇಂದು ಸರ್ಕಾರ ಲೋಕಾಯುಕ್ತ ಮಸೂದೆ ಸೇರಿದಂತೆ ಹತ್ತಕ್ಕೂ ಹೆಚ್ಚು ವಿಧೇಯಕಗಳನ್ನ ಮಂಡನೆ ಮಾಡಿದೆ. 2015ನೇ ಸಾಲಿನ ನಗರಪಾಲಿಕೆ ವಿಧೇಯಕವನ್ನು ಸರ್ಕಾರ ಈ ಸಂದರ್ಭದಲ್ಲಿ ಹಿಂಪಡೆಯಿತು. 2020ರ ಸಾಲಿನ ಬಿಬಿಎಂಪಿ ತಿದ್ದುಪಡಿ ವಿಧೇಯಕದ ಪರಿಶೀಲನಾ ವರದಿಯ ಮಂಡನೆ ಆಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲೋಕಾಯುಕ್ತ ವಿಧೇಯಕ, ಪಟ್ಟಣ ಗ್ರಾಮಾಂತರ ವಿಧೇಯಕ, ಸಾರ್ವಜನಿಕ ನಾಗರಿಕ ಸೇವೆಗಳ ವಿಧೇಯಕಗಳನ್ನ ಮಂಡಿಸಿದರು. ಡಿಸಿಎಂ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಬೇರೆ ಬೇರೆ ವಿಧೇಯಕಗಳನ್ನ ಮಂಡನೆ ಮಾಡಿದರು.
ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ಮಂಡನೆಯಾದ ವಿಧೇಯಕಗಳು:
* 2020ರ ಲೋಕಾಯುಕ್ತ ವಿಧೇಯಕ (ಸಿಎಂ ಯಡಿಯೂರಪ್ಪ ಅವರಿಂದ ಮಂಡನೆ)
* 2020ರ ಪಟ್ಟಣ ಗ್ರಾಮಾಂತರ ವಿಧೇಯಕ (ಸಿಎಂ ಯಡಿಯೂರಪ್ಪ ಅವರಿಂದ ಮಂಡನೆ)
* 2020ರ ಸಾರ್ವಜನಿಕ ಸಿವಿಲ್ ಸೇವೆಗಳ ವಿಧೇಯಕ (ಸಿಎಂ ಯಡಿಯೂರಪ್ಪ ಅವರಿಂದ ಮಂಡನೆ)
* 2020ರ ಭಿಕ್ಷಾಟನೆ ನಿಷೇಧ ತಿದ್ದುಪಡಿ ವಿಧೇಯಕ (ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಂದ ಮಂಡನೆ)* 2020ರ ಕರ್ನಾಟಕ ವಿವಿ ತಿದ್ದುಪಡಿ ವಿಧೇಯಕ (ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರ ಪರವಾಗಿ ಸಚಿವ ಮಾಧುಸ್ವಾಮಿಯಿಂದ ಮಂಡನೆ)
* 2020ರ ಮುಕ್ತ ವಿವಿ ತಿದ್ದುಪಡಿ ವಿಧೇಯಕ‌ (ಕಾನೂನು ಸಚಿವ ಮಾಧುಸ್ವಾಮಿ ಅವರಿಂದ ಮಂಡನೆ)
* 2020 ರ ಪೌರಸಭೆಗಳ ತಿದ್ದುಪಡಿ ವಿಧೇಯಕ (ಕಾನೂನು ಸಚಿವ ಮಾಧುಸ್ವಾಮಿ ಅವರಿಂದ ಮಂಡನೆ)
* 2020ರ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ
* 2020ರ ಭೂ ಸುಧಾರಣಾ ತಿದ್ದುಪಡಿ ವಿಧೇಯಕ (ಕಂದಾಯ ಸಚಿವ ಆಶೋಕ್ ಅವರಿಂದ ಮಂಡನೆ)
* ಕೈಗಾರಿಕಾ ಸೌಲಭ್ಯಗಳ ತಿದ್ದುಪಡಿ ವಿಧೇಯಕ‌ (ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರಿಂದ ಮಂಡನೆ)
* ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ (ಆರೋಗ್ಯ ಸಚಿವ ಶ್ರೀರಾಮುಲು ಅವರಿಂದ ಮಂಡನೆ)
* ರಾಜ್ಯ ಸಾಂಕ್ರಾಮಿಕ ರೋಗಗಳ ವಿಧೇಯಕ (ಆರೋಗ್ಯ ಸಚಿವ ಶ್ರೀರಾಮುಲು ಅವರಿಂದ ಮಂಡನೆ)
ಇನ್ನು, ವಿಧೇಯಕಗಳ ಮಂಡನೆಗೆ ಮುನ್ನ ಸ್ಪೀಕರ್ ಅವರು ಪ್ರಮುಖ ವಿಧೇಯಕಗಳ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿಯೂ, ಪ್ರಮುಖವಲ್ಲದ ವಿಧೇಯಕಗಳಿಗೆ ಚರ್ಚೆಯ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿಧೇಯಕಗಳ ಮಂಡನೆ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನೆರೆ ಹಾಗೂ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ನಿಯಮ 69ರ ಅಡಿಯಲ್ಲಿ ನಿಲುವಳಿ ಸೂಚನೆಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟರು.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment