ಡ್ರಗ್ಸ್ ಜಾಲ-ISD ಪೊಲೀಸರಿಂದ ನಟಿ ಗೀತಾ ಭಟ್-ನಟ ಅಭಿಷೇಕ್ ವಿಚಾರಣೆ

ಡ್ರಗ್ಸ್ ಜಾಲದ ಬಗ್ಗೆ ISD (ಆಂಂತರಿಕಾ ಭದ್ರತಾ ವಿಭಾಗದ)ಪೊಲೀಸರು ಬೆಂಗಳೂರಿನ ಶಾಂತಿನಗರದ ಕಚೇರಿಯಲ್ಲಿ “ಬ್ರಹ್ಮಗಂಟು” ಧಾರವಾಹಿಯ ಪ್ರಮುಖ ಪಾತ್ರದಾರಿ ನಟಿ ಗೀತಾ ಆರತಿ ಭಟ್ ಅವರನ್ನು ವಿಚಾರಣೆ ನಡೆಸಿದರು.
ಈ ವಿಚಾರಣೆ ಬಳಿಕ ಹೇಳಿಕೆ ನೀಡಿದ ನಟಿ ಗೀತಾ ಭಟ್ “ನನಗೆ ಡ್ರಗ್ಸ್ ಬಗ್ಗೆ ಯಾವುದೇ ಮಾಹಿತಿಯಿಲ್ಲ,ಅಲ್ಲದೆ ಯಾವುದೇ ಡ್ರಗ್ಸ್ ಪೆಡ್ಲರ್ ಗಳ ಪರಿಚಯವಾಗಲಿ, ಸಂಪರ್ಕವಾಗಲಿ ಇಲ್ಲ. ನಾನು ಇದುವರೆಗೂ ಯಾವುದೇ ಡ್ರಗ್ಸ್ ಪಾರ್ಟಿಗೆ ಹೋಗಿಲ್ಲ, ಯಾರೋ ನನಗೆ ಆಗದವರು ಈ ರೀತಿ ನನಗೂ ಡ್ರಗ್ಸ್ ಲಿಂಕ್ ಇದೆ ಎಂದು ಸುಳ್ಳು ಮಾಹಿತಿ ಕೊಟ್ಟಿರಬಹುದು,ಆದರೆ ವಿಚಾರಣೆಯಲ್ಲಿ ಹಾಜರಾಗಿದ್ದೇನೆ ಎಂಬ ಮಾತ್ರಕ್ಕೆ ನನಗೆ ಡ್ರಗ್ಸ್ ಲಿಂಕ್ ಇತ್ತು,ಡ್ರಗ್ಸ್ ತಗೊಂಡಿದ್ದೆ ಎಂದು ಹೇಳಲು ಸಾಧ್ಯವಿಲ್ಲ,ಆದಾಗ್ಯೂ ISD ಪೊಲೀಸರು ಈ ವಿಚಾರಣೆಯಲ್ಲಿ 40 ಪ್ರಶ್ನೆಗಳನ್ನು ಕೇಳಿದರು. ನನ್ನ ಮೊಬೈಲ್ ಕಾಲ್ ಡೀಟೈಲ್ಸ್ ಅನ್ನು ಪರಿಶೀಲಿಸಿದರು,ISD ಪೊಲೀಸರು ಹೇಳಿದರೆ ನಾನು ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ “ಗಟ್ಟಿಮೇಳ” ಜನಪ್ರಿಯ ಧಾರವಾಹಿಯ ವಿಕ್ರಾಂತ್ ಖ್ಯಾತಿಯ ಪಾತ್ರದಾರಿ ನಟ ಅಭಿಷೇಕ್ ದಾಸ್ ಅವರನ್ನೂ ಸಹ ಆಂತರಿಕಾ ಭದ್ರತಾ ವಿಭಾಗದ(ISD)ಪೊಲೀಸರು ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಚೇರಿಯಲ್ಲಿ ವಿಚಾರಣೆ ನಡೆಸಿದರು‌.
ಬ್ರಹ್ಮಗಂಟು ಧಾರವಾಹಿಯ ಕಿರುತೆರೆ ನಟಿ ಗೀತಾ ಆರತಿ ಭಟ್ ಮತ್ತು ಗಟ್ಟಿಮೇಳ ಧಾರವಾಹಿಯ ನಟ ಅಭಿಷೇಕ್ ದಾಸ್ ಅವರ ಹೆಸರುಗಳನ್ನು ಕಳೆದ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದ
ಇಬ್ಬರು ಡ್ರಗ್ಸ್ ಪೆಡ್ಲರ್ ಗಳು ವಿಚಾರಣೆಯಲ್ಲಿ ಹೇಳಿದ್ದರು.
ಈಗಾಗಲೇ ಕಿರುತೆರೆಯ ಮತ್ತೊಬ್ಬ ಸುಂದರಿ ನಟಿ ರಶ್ಮಿಕಾ ಚೆಂಗಪ್ಪ ಅವರಿಗೂ ISD ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಆದರೆ ನಟಿ ರಶ್ಮಿಕಾ ಚೆಂಗಪ್ಪ ಅವರಿಂದ ಡ್ರಗ್ಸ್ ಲಿಂಕಿನ ಬಗ್ಗೆ ISD ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಆದಾಗ್ಯೂ ಕನ್ನಡದ ಜನಪ್ರಿಯ ಧಾರವಾಹಿಗಳ ನಟ-ನಟಿಯರಿಗೂ ಡ್ರಗ್ಸ್ ಜಾಲದ ನಂಟಿನ ಬಗ್ಗೆ ಇದೀಗ ಸಿಸಿಬಿ ಪೊಲೀಸರು ಮತ್ತು ಆಂತರಿಕ ಭದ್ರತಾ ವಿಭಾಗದ ಪೊಲೀಸರು ನೋಟಿಸ್ ನೀಡಿ ವಿಚಾರಣೆ ಆರಂಭಿಸಿರುವುದರಿಂದ ಕನ್ನಡದ
ಕಿರುತೆರೆ ಲೋಕ ಬೆಚ್ಚಿಬಿದ್ದಿದೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment