2 ವಿವಾದಿತ ಕೃಷಿ ಮಸೂದೆಗಳನ್ನು ಹಿಂಪಡೆಯುವರೆಗೂ ರಾಜ್ಯಸಭಾ ಕಲಾಪಕ್ಕೆ ವಿ.ಪಕ್ಷಗಳ ಬಹಿಷ್ಕಾರ

ಭಾರತದಲ್ಲಿ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರುವ ಕಡ್ಡಾಯ ಆದೇಶವನ್ನು ಹಿಂಪಡೆದು ಯಾರಾದರೂ ರೈತರ ಕೃಷಿ ಉತ್ಪನ್ನಗಳನ್ನು ಕೊಳ್ಳಬಹುದು ಮತ್ತು ರೈತರು ಯಾರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಬಹುದು ಎಂದು ಅನುಮತಿ ನೀಡುವ ಎರಡು ಕೃಷಿ ಮಸೂದೆಗಳನ್ನು ಕೇಂದ್ರಸರ್ಕಾರ ಲೋಕಸಭೆ,ರಾಜ್ಯಸಭೆ ಎರಡರಲ್ಲೂ ಅಂಗೀಕಾರ ಆಗುವಂತೆ ನೋಡಿಕೊಂಡಿದೆ. ಆದರೆ ಈ ಕೃಷಿ ಮಸೂದೆ ವಿರುದ್ಧ ದೇಶದಲ್ಲೀಗ ಭಾರಿ ಕೋಲಾಹಲ ಎದ್ದಿದೆ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕೃಷಿ ಉತ್ಪನ್ನಗಳಿಗೆ ಇದ್ದ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಿ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ಆದರೆ ಈ ಬಗ್ಗೆ ನವದೆಹಲಿಯಲ್ಲಿ ಹೇಳಿಕೆ ನೀಡಿರುವ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ “ಕೇಂದ್ರದ ಎನ್.ಡಿ.ಎ.ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಎರಡು ಕೃಷಿ ಮಸೂದೆಗಳನ್ನು ಹಿಂಪಡೆಯುವರೆಗೂ ಪ್ರತಿಪಕ್ಷಗಳು ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಲಿವೆ. ಈ ನಿರ್ಧಾರಕ್ಕೆ ಪ್ರತಿಪಕ್ಷಗಳಾದ ಎಸ್.ಪಿ., ಬಿಎಸ್ಪಿ, ಟಿ.ಆರ್.ಎಸ್., ಆರ್.ಜೆ.ಡಿ., ಎಎಪಿ, ಟಿಡಿಪಿ, ಡಿಎಂಕೆ, ಎನ್.ಸಿ.ಪಿ ಪಕ್ಷಗಳು ಬೆಂಬಲಿಸಿವೆ. ಆದಕಾರಣ ಇಷ್ಟೂ ಪಕ್ಷಗಳ ರಾಜ್ಯಸಭಾ ಸದಸ್ಯರು ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಲಿವೆ” ಎಂದು ತಿಳಿಸಿದರು.
ಕೆ ಟಿವಿ ನ್ಯೂಸ್ ನವದೆಹಲಿ

Add Comment