ಬೆಂಗಳೂರಿನಲ್ಲಿ ಶೌಚಾಲಯ ಸಮಸ್ಯೆ: ಶೇ. 100 ರಲ್ಲಿ 60 ರಷ್ಟು ಬಳಸಲು ಯೋಗ್ಯ

0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶೌಚಾಲಯದ ಸಮಸ್ಯೆ ಎದುರಾಗಿದೆ. ಬೆಂಗಳೂರಿನಾದ್ಯಂತ ಸುಮಾರು 478 ಸಾರ್ವಜನಿಕ ಶೌಚಾಲಯಗಳನ್ನು ಸರ್ಕಾರ ನಿರ್ಮಿಸಿದ್ದು, ಆದರೆ ಇದರಲ್ಲಿ ಬಳಕೆಗೆ ಯೋಗ್ಯವಾದವು ಸುಮಾರು ಶೇ. 60 ಮಾತ್ರ. ಉಳಿದವು ಅಂದರೆ ಶೇ.

40 ಶೌಚಾಲಯಗಳು ನೀರಿನ ವ್ಯವಸ್ಥೆ ಇಲ್ಲದಿರುವುದು, ಕಿಟಕಿ, ಬಾಗಿಲು ಇಲ್ಲದಿರುವುದು, ಯಾವುದೇ ಪರಿಕರಗಳು ಇಲ್ಲದಿರುವುದು ಹೀಗೆ ಹಲವು ಸಮಸ್ಯೆಗಳಿಂದಾಗಿ ಬಳಕೆಗೆ ಯೋಗ್ಯವಾಗಿಲ್ಲ.

ಸಾರ್ವಜನಿಕ ಶೌಚಾಲಯಗಳು ಬಳಕೆದಾರರಿಂದ ಮೂತ್ರಕ್ಕೆ 5 ರೂ. ಹಾಗೂ ಮಲ ವಿಸರ್ಜನೆಗೆ 10 ರೂ. ಗಳನ್ನು ನಿರ್ವಹಣೆಗೆಂದು ಸಂಗ್ರಹಿಸಲಾಗುತ್ತಿದೆ. ಆದರೆ ಈ ಹಣ ಗುತ್ತಿಗೆದಾರರ ಜೇಬು ತುಂಬಿಸುತ್ತದೆಯೇ ಹೊರತು ಶೌಚಾಲಯಗಳಲ್ಲಿ ಯಾವುದೇ ಅಭಿವೃದ್ಧಿ ಕಂಡುಬರುತ್ತಿಲ್ಲ. ಸ್ವಚ್ಛ ಭಾರತ್ ಮಿಷನ್ ಅನುಸಾರ ಪ್ರತೀ 100 ಜನರಿಗೆ ಒಂದು ಶೌಚಾಲಯವನ್ನು ನಿರ್ಮಿಸಬೇಕು. ಆದರೆ ನಗರದಲ್ಲಿ ಇವು 200ರಿಂದ 400 ಜನರಿಗೆ ಒಂದರಂತೆ ನಿರ್ಮಾಣಗೊಂಡಿವೆ.

About Author

Leave a Reply

Your email address will not be published. Required fields are marked *

You may have missed