ಮ್ಯಾಕ್ ಡಿನಲ್ಲಿ ಅವಾಂತರ – ಮಗುವಿನ ಬಾಯಲ್ಲಿ ಬಳಸಿದ  ಕಾಂಡೋಮ್

1 Star2 Stars3 Stars4 Stars5 Stars (No Ratings Yet)
Loading...

 

ಕ್ಯಾನ್ಬೆರಾ:  ಬಾಯಲ್ಲಿ ನೀರೂರಿಸುವ ಬರ್ಗರ್ ತಿನ್ನೋಣ ಅಂತ ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟ್ ಗೆ ಹೋದ್ರೆ, ಬಾಯಿಗೆ ಕಾಂಡೋಮ್ ಸಿಗೋದಾ ? ಯಪ್ಪಾ ! ಅದು ಕಣ್ಣಿಗೆ ಬಿದ್ದಿದ್ದೇ ತಡ, ನಖಶಿಖಾಂತ ಉರಿದುಹೋದ ಗ್ರಾಹಕಿಯೊಬ್ಬರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮಹಿಳೆ ತನ್ನ ಮಗು ಹಾಗೂ ಪತಿ ಜೊತೆ ಆಸ್ಟ್ರೇಲಿಯಾದ ಪರ್ಥ್ ನಗರದಲ್ಲಿರುವ ಮ್ಯಾಕ್ ಡೋನಲ್ಡ್ ಗೆ ಬಂದಿದ್ದರು. ಈ ವೇಳೆ ಅಲ್ಲಿ ಬಿದ್ದಿದ್ದ ಬಳಕೆಯಾದ ಕಾಂಡೋಮ್ ಮಗು ಬಾಯಲ್ಲಿ ಹಾಕಿಕೊಂಡಿತ್ತು. ಮಗುವಿನ ಬಾಯಲ್ಲಿ ಕಾಂಡೋಮ್ ನೋಡಿದ ಪೋಷಕರು ಕೂಡಲೇ ಸಿಬ್ಬಂದಿಗೆ ದೂರು ಸಲ್ಲಿಸಿದ್ದರು. ದೂರು ಸಲ್ಲಿಸಿದ ಬಳಿಕ ಮ್ಯಾಕ್ ಡೋನಲ್ಡ್ ಸಿಬ್ಬಂದಿ ಗ್ರಾಹಕರಲ್ಲಿ ಕ್ಷಮೆ ಕೇಳಿದ್ರು.

ಈ ಕುರಿತು ಪ್ರತಿಕ್ರಿಯಿಸಿರುವ ಮಗುವಿನ ತಾಯಿ ವೆಂಡಿ, ನಾನು ಕೌಂಟರ್ ನಲ್ಲಿ ನಿಂತಾಗ ಮಗು ತಂದೆಯ ಜೊತೆಯಲ್ಲಿತ್ತು. ಕೌಂಟರ್ ನಿಂದ ಮಗುವಿನ ಬಳಿ ಹೋದಾಗ ಅದು ಬಾಯಲ್ಲಿ ಕಪ್ಪು ಬಣ್ಣದ ಕಾಂಡೋಮ್ ಹಾಕಿಕೊಂಡಿತ್ತು. ಕೂಡಲೇ ನಾನು ಬಾತ್ ರೂಂಗೆ ಮಗುವನ್ನು ಕರೆದುಕೊಂಡು ಹೋಗಿ ಬಾಯಿಯನ್ನು ಸ್ವಚ್ಛಗೊಳಿಸಿ ನೀರು ಕುಡಿಸಿದೆ. ಕೊನೆಗೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ತಪಾಸಣೆಗೆ ಒಳಪಡಿಸಲಾಯ್ತು. ವೈದ್ಯರು ಮಗು ಬಾಯಲ್ಲಿ ಹಾಕಿಕೊಂಡಿರುವ ಕಾಂಡೋಮ್ ನ್ನು ಲ್ಯಾಬ್ ಗೆ ಕಳುಹಿಸಿದ್ರೆ ಎಲ್ಲ ಅನುಮಾನಗಳು ದೂರವಾಗುತ್ತದೆ ಎಂದು ಹೇಳಿದರು.

ವೈದ್ಯರ ಸಲಹೆಯ ಮೇರೆಗೆ ಮ್ಯಾಕ್ ಡೋನಲ್ಡ್ ಗೆ ತೆರಳಿದಾಗ ಅಲ್ಲಿಯ ಸಿಬ್ಬಂದಿ ತಮ್ಮ ತಪ್ಪನ್ನು ಮರೆ ಮಾಚಲು ಪ್ರಯತ್ನಿಸಿದರು. ಕೊನೆಗೆ ಕ್ಷಮೆ ಕೇಳಿದರು. ಇದೀಗ ಮಗುವಿನ ರಕ್ತದ ಮಾದರಿಯನ್ನು ಲ್ಯಾಬ್ ಗೆ ನೀಡಿದ್ದೇವೆ. ಬ್ಲಡ್ ರಿಪೋರ್ಟ್ ಗಾಗಿ ಮೂರು ತಿಂಗಳು ಕಾಯಬೇಕಿದೆ ಎಂದು ವೆಂಡಿ ಹೇಳಿದ್ದಾರೆ. ಅದು ಬಳಸಿ ಬಿಸಾಡಿರಬಹುದಾದ ಕಾಂಡೋಮ್ ಆಗಿರಬಹುದು ಎನ್ನುವ ಅನುಮಾನ ಆಕೆಯದ್ದು. ಅದು ನಿಜವಾದಲ್ಲಿ, ಮ್ಯಾಕ್ ಡಿ ಭಾರೀ ಸಂಕಷ್ಟಕ್ಕೆ ಸಿಲುಕಲಿದೆ.

Add Comment