ಕೆ.ಆರ್.ಪುರ ಕಾಲೇಜಿನಲ್ಲಿ ವಿಜಯೋತ್ಸವ

1 Star2 Stars3 Stars4 Stars5 Stars (No Ratings Yet)
Loading...

 

ಕೆ.ಆರ್.ಪುರ, ಬೆಂಗಳೂರು : ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಆವಿಷ್ಕಾರಗಳಾಗುತ್ತಿರುವುದರಿಂದ ಯುವ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸ ಕೈಗೊಂಡು ಸಾಧನೆಯ ಕಡೆಗೆ ಗಮನ ಹರಿಸಬೇಕೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಕಿವಿಮಾತು ಹೇಳಿದ್ದಾರೆ.

Vijayotsava at Vijaya College Bangalore

Vijayotsava at Vijaya College Bangalore02

ಕೆ.ಆರ್.ಪುರ ಸಮೀಪದ ಕೊತ್ತನೂರಿನ ವಿಜಯ ವಿಠಲ ತಾಂತ್ರಿಕ ಮಹಾವಿದ್ಯಾಲಯದ ಹತ್ತನೆಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿಜಯೋತ್ಸವ- 2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ನಗರ ಐಟಿ ಹಬ್ ಬೆಳೆದಿದೆ. ಹೊರ ರಾಜ್ಯಗಳಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ತಾಂತ್ರಿಕ ಮಹಾವಿದ್ಯಾಲಯಗಳು ಉತ್ತಮ ಶಿಕ್ಷಣ ಕೊಡುವ ಮೂಲಕ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸಬೇಕು. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ವಿಜಯ ವಿಠಲ ತಾಂತ್ರಿಕ ಮಹಾವಿದ್ಯಾಲಯದ ಕೆಲಸ ಶ್ಲಾಘನೀಯ ಎಂದರು.

Vijayotsava at Vijaya College Bangalore03

Vijayotsava at Vijaya College Bangalore04

Vijayotsava at Vijaya College Bangalore05

Vijayotsava at Vijaya College Bangalore05

 

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಕೆ.ವೇಣುಗೋಪಾಲ್, ವಿದ್ಯಾರ್ಥಿಗಳು ಜೀವನದಲ್ಲಿಖುಷಿಯೊಂದಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಬೇಕು. ಜ್ಞಾನವನ್ನು ಪಡೆಯಲು ವಿವಿಧ ಮಾರ್ಗಗಳಿವೆ. ಗೂಗಲ್, ಪುಸ್ತಕ, ಅನ್ಲೈನ್ ಸೇವೆಗಳ ಮೂಲಕ ಮಾಹಿತಿಯನ್ನು ವಿದ್ಯಾರ್ಥಿಗಳು ಪಡೆಯಬಹುದು ಆದರೆ ತರಗತಿಗಳಲ್ಲಿ ಶಿಕ್ಷಕರಿಂದ ಕಲಿತ ಜ್ಞಾನಕ್ಕೆ ಸಮಾನದುದು ಯಾವುದು ಇಲ್ಲ ಎಂದು ತಿಳಿಸಿದರು.

ವಿಜಯ ವಿಠಲ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಸ್. ರಾಜೇಂದ್ರ, ಅಧ್ಯಕ್ಷೆ ರುಕ್ಮಿಣಿ, ಡಾ.ಶಿವಪ್ರಕಾಶ್ ಇದ್ದರು.

Add Comment