ಮೋದಿ ಫೋಟೋ ಹರಿದಿದ್ದ ಶಾಸಕನಿಗೆ 99 ರೂ. ದಂಡ

0

ಗಾಂಧಿನಗರ: ವಿದ್ಯಾರ್ಥಿಗಳ ಪ್ರತಿಭಟನೆ (Protest) ವೇಳೆ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಕೊಠಡಿಗೆ ನುಗ್ಗಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹರಿದ ಆರೋಪದಡಿ ಕಾಂಗ್ರೆಸ್ (Congress) ಶಾಸಕನಿಗೆ (MLA) ಗುಜರಾತ್ (Gujarat) ನ್ಯಾಯಾಲಯ 99 ರೂ.

ದಂಡ (Fine) ವಿಧಿಸಿದೆ.

ಹೆಚ್ಚುವರಿ ನ್ಯಾಯಾಲಯವು ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಎ ಧಾಧಲ್ ಅವರು ಈ ತೀರ್ಪನ್ನು ನೀಡಿದ್ದಾರೆ. ವಂಸ್ಡಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಅನಂತ್ ಪಟೇಲ್ (Anant Patel) ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ.

2017ರಲ್ಲಿ ಪಟೇಲ್ ಮತ್ತು ಇತರರು ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ನವಸಾರಿ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಕಚೇರಿಗೆ ಪ್ರವೇಶಿಸಿ ಅಶಿಸ್ತಿನ ರೀತಿಯಲ್ಲಿ ವರ್ತಿಸಿದ್ದರು. ವಿಸಿಯ ಮೇಜಿನ ಮೇಲಿದ್ದ ಪ್ರಧಾನಿ ಮೋದಿಯವರ ಫೋಟೋವನ್ನು ಹರಿದು ಹಾಕಿದರು ಎಂಬ ಆರೋಪ ಕೇಳಿ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ 2017ರ ಮೇನಲ್ಲಿ ಜಲಾಲ್‍ಪೋರ್ ಪೊಲೀಸರು ಶಾಸಕ ಪಟೇಲ್ ಮತ್ತು ಇತರ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿದ್ದು, ಅವರಿಗೆ 99 ರೂ. ದಂಡವನ್ನು ನೀಡಲು ಆದೇಶಿಸಿದೆ. ದಂಡವನ್ನು ಕಟ್ಟದಿದ್ದಲ್ಲಿ ಅವರಿಗೆ 7 ದಿನಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಘೋಷಿಸಿದೆ.

About Author

Leave a Reply

Your email address will not be published. Required fields are marked *

You may have missed