ಅವಳಿ ಗಂಡು ಮಕ್ಕಳ ಪೂರ್ಣ ಹೆಸರು ಬಹಿರಂಗಪಡಿಸಿದ ನಯನತಾರಾ ದಂಪತಿ

0

ಕಾಲಿವುಡ್ ಸೂಪರ್ ಸ್ಟಾರ್ ನಯನತಾರ ಕುಟುಂಬ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದಾರೆ. 2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವಳಿ ಗಂಡು ಮಕ್ಕಳನ್ನು ಪಡೆದಿದ್ದು ಇದೀಗ ಮಕ್ಕಳ ಸಂಪೂರ್ಣ ಹೆಸರನ್ನು ದಂಪತಿಗಳು ರಿವೀಲ್ ಮಾಡಿದ್ದಾರೆ.

 

ಅವಳಿ ಗಂಡು ಮಕ್ಕಳಿಗೆ ಉಯಿರ್​ ಮತ್ತು ಉಳಗಂ ಎಂದು ದಂಪತಿಗಳು ನಾಮಕರಣ ಮಾಡಿದ್ದಾರೆ. ಆದರೆ ಮುದ್ದು ಮಕ್ಕಳ ಪೂರ್ತಿ ಹೆಸರು ಏನು ಎಂಬುದನ್ನು ಅವರು ಇಷ್ಟು ದಿನಗಳ ಕಾಲ ಬಹಿರಂಗಪಡಿಸಿರಲಿಲ್ಲ. ಈಗ ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಮಕ್ಕಳ ಪೂರ್ಣ ಹೆಸರು ಏನು ಎಂಬುದನ್ನು ತಿಳಿಸಿದ್ದಾರೆ. ಆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ನಯನತಾರಾ ಅವರು ಇತ್ತೀಚೆಗೆ ಚೆನ್ನೈನಲ್ಲಿ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿದ್ದರು. ಈ ವೇಳೆ ನಯನತಾರಾ ತಮ್ಮ ಮಕ್ಕಳ ಸಂಪೂರ್ಣ ಹೆಸರನ್ನು ಬಹಿರಂಗಪಡಿಸಿದ್ದಾರೆ, ಮೊದಲ ಮಗನ ಹೆಸರು ಉಯಿರ್​ ರುದ್ರೋನೀಲ್​ ಎನ್​. ಶಿವನ್​ ಹಾಗೂ ಎರಡನೇ ಮಗನ ಹೆಸರು ಉಳಗ್​ ದೈವಗನ್​ ಎನ್​. ಶಿವನ್​’ ಎಂದಿದ್ದಾರೆ.

About Author

Leave a Reply

Your email address will not be published. Required fields are marked *

You may have missed