ಈ ಚೆಂದುಳ್ಳಿ ಚೆಲುವೆಗೆ ಖುಲಾಯಿಸಿದ ಅದೃಷ್ಟ ಏನ್ ಗೊತ್ತಾ?

1 Star2 Stars3 Stars4 Stars5 Stars (No Ratings Yet)
Loading...

ಅಚ್ಚರಿಯ ಮದುವೆಯೊಂದಕ್ಕೆ ಜಗತ್ತು ಈಗ ಸಾಕ್ಷಿಯಾಗಿದೆ. ಅಂಗರಕ್ಷಕಿಯಾಗಿದ್ದ ಯುವತಿಯೊಬ್ಬಳಿಗೆ ದಿಢೀರ್ ಮಹಾರಾಣಿಯಾಗುವ ಯೋಗ ಒಲಿದು ಬಂದಿದೆ. ಆ ಪುಣ್ಯಾತ್ ಗಿತ್ತಿ ಯಾರು ಗೊತ್ತಾ ? ಮುಂದೆ ಓದಿ.

ಈಕೆ ಸುಥಿದಾ ತಿಜಯ್. ವಯಸ್ಸು 40. ಥಾಯ್ಲೆಂಡ್ ಮಹಾರಾಜನ ಅಂಗರಕ್ಷಕ ಪಡೆಯಲ್ಲಿ ಕೆಲಸ ಮಾಡ್ತಿದ್ಲು. ನಲ್ವತ್ತಾದ್ರೂ ಯಾಕೆ ಮದ್ವೆಯಾಗಿಲ್ಲ ಅಂತ ಗೆಳತಿಯರು ಛೇಡಿಸ್ತಾನೆ ಇದ್ರು. ಇಂತಿಪ್ಪ ಯುವತಿಗೆ ಈಗ ಅದೃಷ್ಟ ಖುಲಾಯಿಸಿದೆ. ಈಕೆ ಈಗ ಅದೇ ಥಾಯ್ಲೆಂಡ್ ನ ಮಹಾರಾಣಿ.
ಥಾಯ್ಲೆಂಡ್ ರಾಜರಾಗಿ 70 ವರ್ಷ ಆಳ್ವಿಕೆ ನಡೆಸಿದ್ದ ಕಾರ್ನ್ 2016ರಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ವಜಿರಲೊಂಗ್ ಕಾರ್ನ್ ರನ್ನು ರಾಜರನ್ನಾಗಿ ಘೋಷಣೆ ಮಾಡಲಾಗಿತ್ತು. ಶೀಘ್ರದಲ್ಲಿಯೇ ಅಧಿಕೃತವಾಗಿ ವಜಿರಲೊಂಗ್ ಕಾರ್ನ್ ಅಧಿಕಾರ ವಹಿಸಿಕೊಳ್ಳಲಿದ್ದು, ಅದಕ್ಕೂ ಮುನ್ನವೇ ಮದುವೆಯಾಗಿದ್ದಾರೆ. ಇಷ್ಟು ದಿನ ತಮ್ಮ ಅಂಗರಕ್ಷಕ ಪಡೆಯಲ್ಲಿದ್ದ ಸುಥಿದಾ ಅವರನ್ನೇ ಕಿಂಗ್ ಕಾರ್ನ್ ಪಟ್ಟದರಸಿಯನ್ನಾಗಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ವಜಿರಲೊಂಗ್ ಕಾರ್ನ್ ಅವರಿಗೆ ಈಗಾಗಲೇ 3 ಮದುವೆಯಾಗಿದ್ದು, 7 ಜನ ಮಕ್ಕಳಿದ್ದಾರೆ. ಆದರೆ ಮೂವರು ಪತ್ನಿಯರಿಗೂ ವಜಿರಲೊಂಗ್ ಕಾರ್ನ್ ಅವರಿಗೆ ವಿಚ್ಛೇದನ ನೀಡಿದ್ದು, 4ನೇ ಪತ್ನಿಯಾಗಿ ಅಂಗರಕ್ಷಕಿಯನ್ನು ಮದುವೆಯಾಗಿದ್ದಾರೆ. 2014 ರಲ್ಲಿ ಸುಥಿದಾ ಅವರು ರಾಜರ ಭದ್ರತಾ ಕಾರ್ಯಕ್ಕೆ ಅಧಿಕಾರಿಯಾಗಿ ಆಯ್ಕೆ ಆಗಿದ್ದರು. ಇವರ ಮಧ್ಯೆ ಪ್ರೇಮಾಂಕುರವಾಗಿದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಖಾಸಗಿ ಸಮಾರಂಭದಲ್ಲಿ ಮದ್ವೆ ಮಾಡಿಕೊಂಡ ಬಳಿಕ, ರಾಜಭವನವೇ ವಿಡಿಯೋ ಬಿಡುಗಡೆ ಮಾಡಿ, ಜಗತ್ತಿಗೆ ಘೋಷಿಸಿದೆ. ಬ್ಯಾಂಕಾಕ್ ನಲ್ಲಿ ಬೌದ್ಧ, ಬ್ರಾಹ್ಮಣ ಸಂಪ್ರದಾಯದ ಅನ್ವಯ ವಜಿರಲೊಂಗ್ ಕಾರ್ನ್ ಕಿಂಗ್ ರಾಮಘಿ ಹೆಸರಿನಲ್ಲಿ ಶನಿವಾರ ರಾಜನಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಬಳಿಕ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೃಷ್ಟ ಅಂದ್ರೆ ಇವಳದ್ದಪ್ಪಾ !

Add Comment