ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಬೆಳೆಸುವ ದೈಹಿಕ ಶಕ್ತಿಯನ್ನು ದಂಪತಿ ಹೊಂದಿರಬೇಕು: ಹೈಕೋರ್ಟ್

0

ಬೆಂಗಳೂರು: ಬಾಡಿಗೆ ತಾಯ್ತನಕ್ಕೆ ಮುಂದಾಗುವವರಿಗೆ ಪರೀಕ್ಷೆಗೊಳಪಡಿಸಿ ಅವಕಾಶ ಕಲ್ಪಿಸಲು ಬೆಂಗಳೂರಿನ ಹೈಕೋರ್ಟ್(High Court) ನಿರ್ದೇಶನ ನೀಡಿದೆ. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.

ಆನುವಂಶಿಕ ಪರೀಕ್ಷೆಯ(Genetic testing) ಕುರಿತು ವೈದ್ಯಕೀಯ ವರದಿಗಳ ಪ್ರಕಾರ ಭ್ರೂಣಕ್ಕೆ ಆರೋಗ್ಯಕರವಾದ ವೀರ್ಯ ಮತ್ತು ಅಂಡಾಣು ಬೇಕಾಗಿರಲಿದೆ. ಹೊಸ ಸೃಷ್ಟಿಗೆ ಅಗತ್ಯವಾದ ಆನುವಂಶಿಕ ಮಾಹಿತಿ ಒಳಗೊಂಡಿದಿಯೇ ಎಂಬುದನ್ನು ತಿಳಿಸಲು ವೀರ್ಯದ ಸಾಮರ್ಥ್ಯ (Sperm potency)ಪರೀಕ್ಷೆ ಮಾಡುವುದು ಅತ್ಯಗತ್ಯ.

35 ರಿಂದ 40 ವರ್ಷವಾದ ಪುರುಷರಲ್ಲಿ ವೀರ್ಯದ ಆರೋಗ್ಯ (Sperm health)ಕುಗ್ಗುತ್ತದೆ ಎಂದು ವೈದ್ಯಕೀಯ ತಜ್ಞರ ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಆದರೆ, ಅರ್ಜಿದಾರರಿಗೆ ಪ್ರಸ್ತುತ 57 ವರ್ಷ ವಯಸ್ಸಾಗಿದ್ದು, ವೀರ್ಯದ ಆರೋಗ್ಯ ತಿಳಿದುಕೊಳ್ಳಲು ಅವರು ಆನುವಂಶಿಕ ಪರೀಕ್ಷೆಗೆ ಒಳಗಾಗುವುದು ಸೂಕ್ತ ಎಂದು ನ್ಯಾಯಪೀಠ ತಿಳಿಸಿದೆ. ಅಲ್ಲದೆ, ಮಗು ಪಡೆಯಲು ಬಯಸಿರುವ ದಂಪತಿಯು ಮಗುವಿನ ಕಾಳಜಿ ಮಾಡುವ ಮಟ್ಟಕ್ಕೆ ಇರಬೇಕೆ ವಿನಾ ಅವರನ್ನು ತ್ಯಜಿಸುವ ರೀತಿಯಲ್ಲಿರಬಾರದು.

ಮಗುವನ್ನು ಬೆಳೆಸುವ ದೈಹಿಕ ಶಕ್ತಿಯನ್ನು ದಂಪತಿ ಹೊಂದಿರಬೇಕು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲಿಚ್ಛಿಸುವ ದಂಪತಿಯು ಆರ್ಥಿಕವಾಗಿ ಸಬಲರಾಗಿರಬೇಕು. ಮಗು ಬಡತನ ಎದುರಿಸುವಂತಾಗಬಾರದು ಎಂದು ತಿಳಿಸಿರುವ ಹೈಕೋರ್ಟ್, ಬಾಡಿಗೆ ತಾಯ್ತನಕ್ಕೆ ಮುಂದಾಗಿರುವವರು ಈ ರೀತಿಯ ಮೂರು ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ತಿಳಿಸಿದೆ.

About Author

Leave a Reply

Your email address will not be published. Required fields are marked *

You may have missed