ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ವಿಜಯ್ ರೆಡ್ಡಿ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ವಿಜಯ್ ರೆಡ್ಡಿ ಅವರು ಬಹುಅಂಗಾಂಗ ವೈಫಲ್ಯದಿಂದ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
1970 ರಲ್ಲಿ ತೆರೆಕಂಡಿದ್ದ ರಂಗಮಹಲ್ ಕನ್ನಡ ಚಿತ್ರದ ಮೂಲಕ ನಿರ್ದೇಶಕರಾಗಿದ್ದ ವಿಜಯ್ ರೆಡ್ಡಿ ಅವರು ಮುಂದೆ ವರನಟ ದಿವಂಗತ ಡಾ.ರಾಜ್ ಕುಮಾರ್ ಅವರ ನಾಯಕನಾಗಿ ನಟಿಸಿದ
ಮಯೂರ,ಗಂಧದ ಗುಡಿ,ಸನಾದಿ ಅಪ್ಪಣ್ಣ,ಹುಲಿಯ ಹಾಲಿನ ಮೇವು,ಶ್ರೀನಿವಾಸ ಕಲ್ಯಾಣ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದ ಅಗ್ರಗಣ್ಯ ನಿರ್ದೇಶಕ ಎಂದು ಹೆಸರಾಗಿದ್ದರು.
ಒಟ್ಟಾರೆ 48 ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್
ರೆಡ್ಡಿ ಅವರು ಹಲವು ದಿನಗಳಿಂದ ಬಹುಅಂಗಾಂಗ ವೈಫಲ್ಯದಿಂದ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು‌.
ಕೆ ಟಿವಿ ನ್ಯೂಸ್ ಚೆನ್ನೈ

Add Comment