ಕಾಲಿವುಡ್ ಗೂ ಪದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ

ಕನ್ನಡ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಬಳಿಕ ಬೇರೆ ಬೇರೆ ಭಾಷೆಯಲ್ಲಿ ನಟಿಸಿ ಎಲ್ಲರ ಮನೆ ಮಾತಾದರು. ಇಷ್ಟುದಿನ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದ ರಶ್ಮಿಕಾ, ಈಗ ತಮಿಳು ನಟ ಕಾರ್ತಿ ಜೊತೆ ಸುಲ್ತಾನ್ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಕಾಲಿವುಡ್‌ಗೆ ಪ್ರವೇಶ ಮಾಡಿದ್ದಾರೆ. ಕಳೆದ ವರ್ಷ ಆರಂಭವಾಗಿದ್ದ ಈ ಚಿತ್ರದ ಶೂಟಿಂಗ್ ಕೊರೊನಾದಿಂದಾಗಿ ಸ್ಥಗಿತಗೊಂಡಿತ್ತು. ಆದರೆ ಲಾಕ್‌ಡೌನ್ ಅನ್‌ಲಾಕ್ ಆಗಿದ್ದರಿಂದ ಕೊನೆಗೂ ಚಿತ್ರೀಕರಣ ಮುಗಿದಿದೆ. ಇದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಖುಷಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಈ ಸಿನಿಮಾ ಶೂಟಿಂಗ್ ಮುಗಿದಿದೆ. ನಾನು ಕೆಲಸ ಮಾಡಿದ ಅತ್ಯಂತ ಉತ್ತಮ ತಂಡಗಳಲ್ಲಿ ಇದು ಒಂದು. ಈ ಸಿನಿಮಾ ಯಶಸ್ವಿ ಕಾಣುತ್ತೆ ಎಂಬ ನಂಬಿಕೆ ಇದೆ ಎಂದಿದ್ದಾರೆ. ಈ ಸಿನಿಮಾವನ್ನು ರೆಮೊ ಸಿನಿಮಾ ಖ್ಯಾತಿಯ ನಿರ್ದೇಶಕ ಬಕ್ಕಿಯಾರಾಜ್ ಕಣ್ಣನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯೋಗಿಬಾಬು, ಪೊಣ್ಣಂಬಾಲನ್ ನಟಿಸಿದ್ದು, ವಿವೇಕ್ ಮತ್ತು ಮರ್ವಿನ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

 

Add Comment