EXCLUSIVE BREAKING- ಕುಮಾರಸ್ವಾಮಿ ಮೇಲೆ ಸಿಟ್ಟು – JDS ತೊರೆಯಲು ಮುಂದಾದ್ರಾ ದೇವೇಗೌಡ?

1 Star2 Stars3 Stars4 Stars5 Stars (No Ratings Yet)
Loading...

ಬೆಂಗಳೂರು : ಕಾಂಗ್ರೆಸ್ ನಲ್ಲಷ್ಟೇ ಸಿಎಂ ವಿರುದ್ಧ ಅಸಮಾಧಾನವಿದೆ. ಇದು ಕುಮಾರಸ್ವಾಮಿ ಸರಕಾರವನ್ನೇ ಬಲಿಪಡೆಯಬಹುದು ಎಂಬೆಲ್ಲಾ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಸ್ತಿವೆ. ಈ ಮಧ್ಯೆ, ಜೆಡಿಎಸ್​ನಲ್ಲೇ ಅಸಮಾಧಾನ ಸ್ಫೋಟಗೊಳ್ಳಲಿದೆ. ಕುಮಾರಸ್ವಾಮಿಯವರ ನಡವಳಿಕೆಯಿಂದ ಬೇಸತ್ತು ದೇವೇಗೌಡರೇ ಪಕ್ಷ ತೊರೆಯಲಿದ್ದಾರೆ ಎಂಬ ಎಕ್ಸ್​ಕ್ಲೂಸಿವ್ ಮಾಹಿತಿ ಸಿಕ್ಕಿದೆ.

ಖಾತೆ ಹಂಚಿಕೆಯಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲಿಯೂ ಅನ್ಯಾಯವಾಗಿದೆ ಎನ್ನುತ್ತಿದ್ದ ಜಿ.ಟಿ.ದೇವೇಗೌಡ, ಜೆಡಿಎಸ್ ವರಿಷ್ಠರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಸಚಿವರಾದ ದೇವೇಗೌಡರು ಸಹಕಾರ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ. ಅವರಿಗೆ ಉನ್ನತ ಶಿಕ್ಷಣ ಇಲಾಖೆ ನೀಡಲಾಗಿತ್ತು. ಇಷ್ಟಾದರೂ, ಈವರೆಗೆ ಒಂದೇ ಒಂದು ಕುಲಪತಿಗಳ ಸಭೆ ಕರೆಯಲು ಸಿಎಂ ಬಿಟ್ಟಿಲ್ಲ ಎಂಬ ಅಸಮಾಧಾನ ಅವರಲ್ಲಿದೆಯಂತೆ. ಅಷ್ಟೇ ಅಲ್ಲ, ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆಯೂ ಕುಮಾರಸ್ವಾಮಿ ಅವಮಾನ ಮಾಡಿದ್ರಂತೆ.

ನಾಮಪತ್ರ ಸಲ್ಲಿಸುವ ವೇಳೆ ಜಿಟಿ ದೇವೇಗೌಡರ ಅವಶ್ಯಕತೆ ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಕುಮಾರಸ್ವಾಮಿ ಹೇಳಿದ್ರಂತೆ. ಅಲ್ಲದೆ, ಜೆಡಿಎಸ್ ಗೆ ರಾಜ್ಯದಲ್ಲಿ ಭವಿಷ್ಯವಿಲ್ಲ. ಈಗಲೇ ಬೇರೆ ಜಾಗ ಹುಡುಕಿಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಜಿಟಿಡಿ ಬಂದಿದ್ದಾರಂತೆ. ತಾವು ಈ ಹಿಂದೆ ಇದ್ದು ಬಂದಂತಹ ಬಿಜೆಪಿಗೆ ಮತ್ತೆ ತೆರಳಲು ದೇವೇಗೌಡರು ಚಿತ್ತ ನೆಟ್ಟಿದ್ದಾರಂತೆ. ಇದಕ್ಕೆ ಸಂಸದ ಪ್ರತಾಪಸಿಂಹ ವೇದಿಕೆ ರೆಡಿ ಮಾಡ್ತಿದ್ದಾರಂತೆ.

Add Comment