ಕಟ್ಟಡದ 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ..!

0

ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ (Death Note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಯಿಶಾ ಬಿ.ಆರ್. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಬಿಎಸ್ ಸಿ ಕಂಪ್ಯೂಟರ್ ಸೈನ್ಸ್ (BSc Computer Science) ಓದುತ್ತಿದ್ದ ಈಕೆ ಇಂದು (ಭಾನುವಾರ) ಬೆಳಗ್ಗೆ ಬಿನ್ನಿ ಮಿಲ್ ಸಮೀಪದ ಪೊಲೀಸ್ ಕ್ವಾರ್ಟರ್ಸ್ ನ ಏಳನೇ ಮಹಡಿಯಿಂದ ಹಾರಿ ಸೂಸೈಡ್ ಮಾಡಿಕೊಂಡಿದ್ದಾಳೆ.

ಭೀಮೇಶ್ ಎಂಬ ಯುವಕನನ್ನು ಆಯಿಶಾ ಪ್ರೀತಿ ಮಾಡುತ್ತಾ ಇದ್ದಳು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಮನೆಯವರು ಪ್ರೀತಿಯನ್ನು ನಿರಾಕರಿಸಿದ್ದರಿಂದ ತನ್ನ ಪ್ರಿಯಕರನ ಮೊಬೈಲ್ ನಂಬರ್ ಕೈ ಮೇಲೆ ಬರೆದುಕೊಂಡು ತನ್ನ ಸಾವಿನ ವಿಚಾರ ಆತನಿಗೆ ತಿಳಿಸುವಂತೆ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

About Author

Leave a Reply

Your email address will not be published. Required fields are marked *

You may have missed