ಮತ್ತೆ ಒಂದಾದ ಚಿತ್ರಸಾಹಿತಿ ಕೆ.ಕಲ್ಯಾಣ್-ಪತ್ನಿ ಅಶ್ವಿನಿ

ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕೆ.ಕಲ್ಯಾಣ್ ಅವರ ಕೌಟುಂಬಿಕ ಕಲಹ ಸುಖಾಂತ್ಯವಾಗಿದೆ.
ಬೆಳಗಾವಿ ಪೊಲೀಸರು ಕೌನ್ಸಿಲಿಂಗ್ ನಡೆಸಿ ಕೆ.ಕಲ್ಯಾಣ್ ಅವರಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿ ಅಶ್ವಿನಿ
ಅವರು ಮತ್ತೆ ಪತಿ ಕೆ.ಕಲ್ಯಾಣ್ ಅವರೊಂದಿಗೆ ಕೂಡಿ ಬಾಳುವುದಾಗಿ ತಿಳಿಸಿ ತಮ್ಮ ವಿವಾಹ ವಿಚ್ಛೇದನ ಅರ್ಜಿಯನ್ನು ವಾಪಾಸ್ ಪಡೆದಿದ್ದಾರೆ. ಅಲ್ಲದೆ ತಮ್ಮ ಬೆಳಗಾವಿಯ ಪತಿ ಕೆ.ಕಲ್ಯಾಣ್ ಅವರ ಮನೆಯಲ್ಲಿ ಕೆಲಸಗಾರ್ತಿಯಾಗಿದ್ದ ಗಂಗಾ ಕುಲಕರ್ಣಿ ಮತ್ತು ಕೆ.ಕಲ್ಯಾಣ್ ಸಂಬಂಧಿ ಶಿವಾನಂದ ವಾಲಿ ಅವರು ತಮ್ಮ ವೈವಾಹಿಕ ಜೀವನವನ್ನು ಕೊನೆಗಾಣಿಸಲು ಭಾರಿ ಷಡ್ಯಂತ್ರ ರೂಪಿಸಿದ್ದರು. ಶಿವಾನಂದ ಮಾಲಿ ನನ್ನ ಮೇಲೆ ಹಾಗೂ ನನ್ನ ತಂದೆ-ತಾಯಿ ಮೇಲೆ ವಶೀಕರಣ,ಮಾಟ,ಮಂತ್ರ ಮಾಡಿಸಿ ಪತಿ ಕೆ.ಕಲ್ಯಾಣ್ ಅವರಿಂದ ವಿವಾಹ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಲು ಬಲವಂತ ಮಾಡಿದ್ದರು. ಆದ್ದರಿಂದ ಯಾರೂ ಸಹ ಮನೆ ಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಪರಿಶೀಲಿಸಿ ಎಚ್ಚರಿಕೆಯಿಂದ ಇರಿ ಎಂದು ಪತ್ನಿ ಅಶ್ವಿನಿ ಕರೆ ನೀಡಿದ್ದಾರೆ.
ಇದಕ್ಕಾಗಿ ಪತಿ ಕೆ.ಕಲ್ಯಾಣ್ ಅವರ 6 ಕೋಟಿ ರೂ. ಮೌಲ್ಯದ ನಗದು,ಸೈಟ್,ಒಡವೆಗಳನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಶಿವಾನಂದ ಮಾಲಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ‌. ಆದರೆ ಮನೆಕೆಲಸಗಾರ್ತಿ ಗಂಗಾ ಕುಲಕರ್ಣಿ ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದಾಳೆ. ಬೆಳಗಾವಿ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ.
ಕೆ ಟಿವಿ ನ್ಯೂಸ್ ಬೆಳಗಾವಿ

Add Comment