BREAKING – ಸುಬ್ರಹ್ಮಣ್ಯ ದೇಗುಲದಲ್ಲಿ ನವಿಲು ಪ್ರತ್ಯಕ್ಷ !

ದೇವರ ಕಾರಣಿಕಕ್ಕೆ ಪ್ರಸಿದ್ಧವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಮತ್ತೊಂದು ಅಚ್ಚರಿ ನಡೆದಿದೆ. ಮಂಗಳೂರಿನ ನೀರುಮಾರ್ಗದ ಬಳಿ ಇರುವ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ ಈ ಅಚ್ಚರಿಗೆ ಸಾಕ್ಷಿಯಾಗಿದೆ.

ದೇಗುಲದಲ್ಲಿ ಸುಬ್ರಹ್ಮಣ್ಯನ ವಾಹನ ನವಿಲು ಪ್ರತ್ಯಕ್ಷವಾಗಿದ್ದು ಭಕ್ತರ ಅಚ್ಚರಿಗೆ ಕಾರಣವಾಗಿದೆ. ದೇವರಿಗೆ ಅರ್ಪಿಸಿದ ಧ್ವಜಸ್ತಂಭಕ್ಕೆ ನಿನ್ನೆ ತೈಲಧಿವಾಸ ಪೂಜೆ ಅದ್ದೂರಿಯಾಗಿ ನಡೆದಿತ್ತು. ಈ ವೇಳೆ ನವಿಲು ಪ್ರತ್ಯಕ್ಷವಾಗಿ ಪೂಜೆಯಲ್ಲಿ ಭಾಗಿಯಾಗಿದೆ. ದೇವರ ಪ್ರತಿ ಪೂಜಾ ಕಾರ್ಯದಲ್ಲೂ ನವಿಲು ಭಾಗಿಯಾಗಿ ದೇಗುಲಕ್ಕೆ ಪ್ರದಕ್ಷಿಣೆ ಹಾಕಿತ್ತು. ಜನರ ಜೊತೆಯೆ ನವಿಲು ಕೂಡ ದೇಗುಲಕ್ಕೆ ಪ್ರದಕ್ಷಿಣೆ ಹಾಕಿತ್ತು. ಧ್ವಜಸ್ತಂಭಕ್ಕೆ ಪೂಜೆ ನೆರವೇರುವಾಗ ದೇಗುಲದ ಒಳಗಿನಿಂದ ನವಿಲಿನ ಜೋರಾದ ಧ್ವನಿ ಭಕ್ತರು ಅಚ್ಚರಿಯ ಕಡಲಲ್ಲಿ ತೇಲಾಡಿದ್ರು.

ಸುಬ್ರಹ್ಮಣ್ಯನಿಗೆ ಗರ್ಭಗುಡಿಯಲ್ಲಿ ಪೂಜೆ ನೆರವೇರಿದಾಗ ಮುಂಭಾಗದಲ್ಲಿ ನವಿಲು ನಿಂತು ಪೂಜೆ ವೀಕ್ಷಿಸಿತು. ಇದನ್ನು ಕಂಡ ಭಕ್ತರು ಇದು ದೇವರ ಮಹಿಮೆಯೇ ಇರಬೇಕೆಂದು ಭಕ್ತಿಯಿಂದ ಕೈಮುಗಿದು ಭಕ್ತಿಪರವಶರಾದ್ರು.

Add Comment