BREAKING – ನಿಮ್ಮ ವಾಟ್ಸಪ್​ಗೆ ವೈರಸ್ ಬಂದಿದೆ ಹುಷಾರ್ ! ಈಗ್ಲೇ ಚೆಕ್ ಮಾಡ್ಕೊಳ್ಳಿ

1 Star2 Stars3 Stars4 Stars5 Stars (No Ratings Yet)
Loading...

ನೀವು ವಾಟ್ಸಪ್ ಬಳಸ್ತಿದ್ದೀರಾ ? ನಿಮ್ಮ ವಾಟ್ಸಪ್​ಗೆ ಮಿಸ್ಡ್ ಕಾಲ್ ಬಂತಾ ? ಹಾಗಿದ್ದರೆ, ನೀವು ಭಾರೀ ಅಪಾಯಕ್ಕೆ ಸಿಲುಕಿದ್ದೀರಿ. ಹೌದು, ವಾಟ್ಸಪ್​ಗೆ ಇಸ್ರೇಲ್ ಮೂಲದ ಸ್ಪೈ ವೇರ್ ವೈರಸ್ ಅಟ್ಯಾಕ್ ಆಗಿದೆ. ಒಂದೇ ಒಂದು ವಾಯ್ಸ್ ಕಾಲ್ ಮೂಲಕ, ಸ್ಪೈವೇರ್ ನಿಮ್ಮ ಮೊಬೈಲ್ ನಲ್ಲಿ ಇನ್ಸ್​​ಟಾಲ್ ಆಗುತ್ತಿದೆ ಎಂದು ವಾಟ್ಸಪ್ ಕಂಪನಿ ಅಧಿಕೃತವಾಗಿ ಘೋಷಿಸಿದೆ. ಐಫೋನ್, ಆಂಡ್ರಾಯ್ಡ್​ ಫೋನ್​ಗಳಿಗೆ ಈ ವೈರಸ್ ಅಟ್ಯಾಕ್ ಆಗ್ತಿದ್ದು, ಸುಲಭವಾಗಿ ಡಾಟಾ ಹ್ಯಾಕ್ ಆಗ್ತಿದೆ ಎಂದು ಸಂಸ್ಠೆ ಬಳಕೆದಾರರಿಗೆ ಅಲರ್ಟ್ ನೀಡಿದೆ. ತಕ್ಷಣವೇ ವಾಟ್ಸಪ್ ಆಪ್ ಅಪ್​ಡೇಟ್ ಮಾಡಿಕೊಳ್ಳಿ ಎಂದು ವಾಟ್ಸಪ್ ಹೇಳಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನೂ ಭೇದಿಸಿ, ವೈರಸ್ ಅಟ್ಯಾಕ್ ಆಗ್ತಿರೋದು ತೀವ್ರ ಚಿಂತೆಗೆ ಕಾರಣವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

Add Comment