ಐಪಿಎಲ್- 20: ಕೆಕೆಆರ್ ವಿರುದ್ಧ ಗೆದ್ದ ಮುಂಬೈಗೆ 8 ವಿಕೆಟ್ ಗಳ ಸುಲಭ ಜಯ

ಕೊರೊನಾ ವೈರಸ್ ಸೋಂಕು ಭಾರತದಲ್ಲಿ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಯುಎಇ ದೇಶದಲ್ಲಿ ನಡೆಯುತ್ತಿರುವ ಈ ವರ್ಷದ ಐಪಿಎಲ್-20 ಟೂರ್ನಿಯ ಶುಕ್ರವಾರದ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೊಲ್ಕತಾ ನೈಟ್ ರೈಡರ್ಸ್ ತಂಡವನ್ನು ವಿಕೆಟ್ ಗಳಿಂದ ಸೋಲಿಸಿದೆ.
ಅಬುಧಾಬಿಯಲ್ಲಿ ನಡೆದ ಶುಕ್ರವಾರದ ಎರಡನೇ ಸರದಿಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ಆದರೆ 10.4 ಓವರ್ ಗಳಲ್ಲೇ ಪ್ರಮುಖರಾಗಿದ್ದ 5 ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡು 61 ರನ್ ಗಳಿಸಿ ಕೆಕೆಆರ್ ಸಂಕಷ್ಟದಲ್ಲಿತ್ತು. ಆದರೆ ಆಗ ಮಾರ್ಗನ್ ಅಜೇಯ 39 ರನ್ (29 ಎಸೆತ,2 ಬೌಂಡರಿ,2 ಸಿಕ್ಸರ್) ಹಾಗೂ ಕುಮ್ಮಿನ್ಸ್ ಅಜೇಯ 53 ರನ್(28 ಎಸೆತ,5 ಬೌಂಡರಿ,2 ಸಿಕ್ಸರ್) ಬಾರಿಸಿ ತಂಡದ ಮೊತ್ತವನ್ನು 148 ರನ್ ಗಳಿಗೆ ಅಂತ್ಯಗೊಳಿಸಿದರು.
ಮುಂಬೈ ಇಂಡಿಯನ್ಸ್ ಪರ ರಾಹುಲ್ ಚಹರ್ ಅತ್ಯುತ್ತಮವಾಗಿ
ಬೌಲಿಂಗ್ ಮಾಡಿ 2 ವಿಕೆಟ್ ಪಡೆದರು. ಅವರ ಬೌಲಿಂಗ್ ಸ್ಪೆಲ್ ಹೀಗಿತ್ತು: 4-0-18-2. ಅದೇ ರೀತಿ ಬುಮ್ರಾ ಸಹ ಚೆನ್ನಾಗಿ ಬೌಲ್ ಮಾಡಿದರು(4-0-22-1).
ಬಳಿಕ 149 ರನ್ ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿತು. ಪರಿಣಾಮ ಅರಂಭದ 10.3 ಓವರ್ ಗಳಲ್ಲೇ ಮುಂಬೈ ಬಿರುಸಿನ 94 ರನ್ ಗಳಿಸಿ ಗೆಲುವನ್ನು ಖಚಿತಪಡಿಸಿಕೊಂಡಿತ್ತು. ಆಗ ಓಪನರ್ ಆದ ನಾಯಕ ರೋಹಿತ್ ಶರ್ಮಾ 35 ರನ್(20 ಎಸೆತ,5 ಬೌಂಡರಿ,1 ಸಿಕ್ಸರ್) ಬಾರಿಸಿ ಔಟಾದರು. ಬಳಿಕ ಬಂದ ಸೂರ್ಯಕುಮಾರ್ 10 ರನ್ ಗಳಿಸಿ ಔಟಾದಾಗ ಸ್ಕೋರ್ 111 ಆಗಿತ್ತು. ಆಗ ಓಪನರ್ ಕ್ವಿಂಟನ್ ಡಿ ಕಾಕ್ ಅಜೇಯ 78 ರನ್(44 ಎಸೆತ,9 ಬೌಂಡರಿ,3 ಸಿಕ್ಸರ್) ಮತ್ತು ಹಾರ್ದಿಕ್ ಪಂಡ್ಯಾ ಅಜೇಯ 21 ರನ್(11 ಎಸೆತ,3 ಬೌಂಡರಿ,1 ಸಿಕ್ಸರ್) ಬಾರಿಸಿ ಮುಂಬೈ ಇಂಡಿಯನ್ಸ್ 16.5 ಓವರ್ ಗಳಲ್ಲೇ 2 ವಿಕೆಟ್ ಗೆ 149 ರನ್ ಗೆಲುವಿನ ಗುರಿ ತಲುಪಿಸಿದರು.
ಮುಂಬೈ ಪರ ಅಜೇಯ 78 ರನ್ ಬಾರಿಸಿ ಗೆಲುವಿಗೆ ಕಾರಣರಾದ ಓಪನರ್ ಕ್ವಿಂಟನ್ ಡಿ ಕಾಕ್ ಅವರಿಗೆ ಪಂದ್ಯಪುರುಷ ಪ್ರಶಸ್ತಿ ನೀಡಲಾಯಿತು.
ಈ ಮೂಲಕ ಒಟ್ಟು 8 ಪಂದ್ಯಗಳಿಂದ 6ನೇ ಗೆಲುವನ್ನು ಪಡೆದ ಮುಂಬೈ ಇಂಡಿಯನ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ತಲುಪುವ ಅವಕಾಶವನ್ನು ಹೆಚ್ಚಿಸಿಕೊಂಡಿತು. ಆದರೆ ತನ್ನ 8ನೇ ಪಂದ್ಯದಲ್ಲಿ 4ನೇ ಸೋಲು ಕಂಡ ಕೆಕೆಆರ್ ತಂಡ ಹಿಂದಿನ 4 ಜಯದೊಂದಿಗೆ 8 ಅಂಕ ಗಳಿಸಿ 4ನೇ ಸ್ಥಾನದಲ್ಲೇ ಮುಂದುವರೆದಿದೆ.
ಕೆ ಟಿವಿ ನ್ಯೂಸ್ ಅಬುಧಾಬಿ

Add Comment