ಫೋಟೋ ಶೇರ್ ಮಾಡಿ ಅಣ್ಣನ ಹುಟ್ಟುಹಬ್ಬಕ್ಕೆ ಧ್ರುವ ವಿಶ್

ಇಂದು ನಟ ಚಿರಂಜೀವಿ ಸರ್ಜಾ ಅವರ ೩೬ನೇ ಜನ್ಮದಿನವಾಗಿದ್ದು, ಅವರ ಅಗಲಿಕೆಯ ನೆನಪಿನಲ್ಲಿಯೇ ಕುಟುಂಬಸ್ಥರು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಪತ್ನಿ ಮೇಘನಾ ರಾಜ್ ಸ್ಪೆಷಲ್ ವಿಡಿಯೋ ಹಂಚಿಕೊಂಡು ವಿಶ್ ಮಾಡಿದರೆ, ಧ್ರುವ ಚಿಕ್ಕ ವಯಸ್ಸಿನಲ್ಲಿ ಅಣ್ಣನೊಂದಿಗೆ ಕಾಲ ಕಳೆದ ಚಿತ್ರಗಳನ್ನು ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಣ್ಣನೊಂದಿಗೆ ಇದ್ದ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿಕೊಂಡು ಧ್ರುವ ಸರ್ಜಾ ಅಣ್ಣನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಹ್ಯಾಪಿ ಬರ್ಥ್ ಡೇ ಲವ್ ಯು ಫಾರ್ ಎವರ್ ಎಂದು ಬರೆದುಕೊಂಡಿದ್ದಾರೆ. ಚಿಕ್ಕ ವಯಸ್ಸಿನ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಎರಡನೇ ಸ್ಟೇಟಸ್‍ನಲ್ಲಿ 3 ಫೋಟೋಗಳನ್ನು ಸೇರಿಸಿ ಸಣ್ಣವರಿದ್ದಾಗಿನ ಹಾಗೂ ಹಳೆಯ, ಇನ್ನೊಂದು ಇತ್ತೀಚಿನ ಫೋಟೋ ಪೋಸ್ಟ್ ಮಾಡಿದ್ದಾರೆ.

Add Comment