ಅನಿಲ್ ಕುಂಬ್ಳೆಗೆ ಹುಟ್ಟುಹಬ್ಬ ಶುಭಾಷಯ ಕೋರಿದ ಕಿಚ್ಚ ಸುದೀಪ್

ಭಾರತದ ಕ್ರಿಕೆಟ್ ಕಂಡ ಅದ್ಭುತ ನಾಯಕ ಅನಿಲ್ ಕುಂಬ್ಳೆ ಅವರ ಹುಟ್ಟುಹಬ್ಬಕ್ಕೆ ನಟ ಕಿಚ್ಚ ಸುದೀಪ್ ಶುಭಾಷಯ ಕೋರಿದ್ದಾರೆ. ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆಯವರು ಇಂದು ತಮ್ಮ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಟ್ವೀಟ್ ಮೂಲಕ ಶುಭಾಷಯ ತಿಳಿಸಿರುವ ಕಿಚ್ಚ ನೀವು ಮೈದಾನದಲ್ಲಿ ಹೀರೋ ಆಗಿದಕ್ಕೆ, ಅದು ನಿಮ್ಮನಿಂದು ಲೆಜೆಂಡ್ ಆಗಿ ಮಾಡಿದೆ ಅನಿಲ್ ಕುಂಬ್ಳೆ ಸರ್. ಆದರೆ ಎಲ್ಲ ಪರಿಸ್ಥಿತಿಯನ್ನು ನೀವು ನಿಭಾಯಿಸಿದ ರೀತಿ ನಿಮ್ಮನ್ನು ಗುರುತಿಸುವಂತೆ ಮಾಡಿದೆ. ಕೆಲ ಪರಿಸ್ಥಿತಿಯಲ್ಲಿ ನಿಮ್ಮ ಮಾತುಗಳು ನೀವು ಓರ್ವ ಜೆಂಟಲ್‍ಮ್ಯಾನ್ ಎಂಬುದನ್ನು ತೋರಿಸಿಕೊಟಿವೆ. ಅದೇ ನಮಗೆ ಸ್ಫೂರ್ತಿ. ನೀವು ಎಂದಿಗೂ ನಮ್ಮ ಹೆಮ್ಮೆ ಹುಟ್ಟುಹಬ್ಬದ ಶುಭಾಶಯಗಳು ಸರ್ ಎಂದು ಬರೆದುಕೊಂಡಿದ್ದಾರೆ.

One thought on “ಅನಿಲ್ ಕುಂಬ್ಳೆಗೆ ಹುಟ್ಟುಹಬ್ಬ ಶುಭಾಷಯ ಕೋರಿದ ಕಿಚ್ಚ ಸುದೀಪ್

  1. ಸೂಪರ್ ಅನಿಲ್ ಕುಂಬ್ಳೆ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಪಾಕಿಸ್ತಾನದ ಎಲ್ಲಾ 10 ವಿಕೆಟ್ ಗಳನ್ನು ಪಡೆದು ಇಂಗ್ಲೆಂಡ್ ನ ಜಿಮ್ ಲೇಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿ ವಿಶ್ವ ಕ್ರಿಕೆಟ್ ನಲ್ಲಿ ಅಗ್ರ ಬೌಲರ್ ಎನಿಸಿಕೊಂಡಿದ್ದಾರೆ. ಕಿಚ್ಚ ಕುಂಬ್ಳೆ ಸರ್ ಅವರ ಓರ್ವ ಅಭಿಮಾನಿಯಷ್ಟೆ.

Add Comment