ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡ್ತಿದೆ-ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನೆರೆ ಹಾನಿಯಿಂದ ರಾಜ್ಯದಲ್ಲಿ 10 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಅಕ್ಟೋಬರ್ 14ರಂದೇ  ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೆ, ಎಚ್ಚರಿಕೆ ವಹಿಸಬೇಕು ಅಂತ.  50 ವರ್ಷಗಳಲ್ಲಿ ಬೀಳದ ಮಳೆ ಈ ಬಾರಿ ಬಿದ್ದಿದೆ. 7 ಲಕ್ಷ ತೊಗರಿ ಬೆಳೆ ಹಾಳಾಗಿದೆ. ನಾವು ಎಚ್ಚರಿಕೆ ಕೊಟ್ಟರೂ ಕೂಡ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕರ್ನಾಟಕ ರಾಜ್ಯಕ್ಕೆ ಸಕಲ ನೆರವು ಅಂತಿದ್ದಾರೆ. ಏನ್ ನೆರವು ಕೊಟ್ಟಿದ್ದಾರೆ? ಎಲ್ಲರೂ ಕೇಂದ್ರಕ್ಕೆ ಮನವಿ ಮಾಡ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

Add Comment