ಸ್ಮಾರ್ಟ್ ಸಿಟಿಗಳಲ್ಲಿ ಅಡುಗೆ ಸಿಲಿಂಡರ್ ಪಡೆಯಲು OTP ಕಡ್ಡಾಯ

ಕರ್ನಾಟಕದ ಬೆಂಗಳೂರು,ತುಮಕೂರು,ದಾವಣಗೆರೆ,
ಮಂಗಳೂರು,ಹುಬ್ಬಳ್ಳಿ-ಧಾರವಾಡ ಮಹಾನಗರಗಳು ಸೇರಿದಂತೆ ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ ನವೆಂಬರ್ 1 ರಿಂದ
ಡೆಲಿವರಿ ಅಥೆಂಟಿಕ್ ಕೋಡ್(NAC) ಪ್ರಕಾರ ಇನ್ನುಮುಂದೆ ಗೃಹ ಬಳಕೆಯ ಅಡುಗೆ ಸಿಲಿಂಡರ್ ಗಳನ್ನು ಪಡೆಯಲು OTP ಸಂಖ್ಯೆಯನ್ನು ಕಡ್ಡಾಯವಾಗಿ ಡೆಲಿವರಿ ಬಾಯ್ ಗೆ ಹೇಳಿದರೆ ಮಾತ್ರ ಆತ ಗೃಹ ಬಳಕೆಯ ಅಡುಗೆ ಸಿಲಿಂಡರ್ ಕೊಡುತ್ತಾನೆ. ಅಂದಹಾಗೆ ಅಡುಗೆ ಗ್ಯಾಸ್ ಸಿಲಿಂಡರ್ ಪಡೆಯುವ ಗ್ರಾಹಕರು ಕಡ್ಡಾಯವಾಗಿ ಗ್ಯಾಸ್ ಏಜೆನ್ಸಿಗೆ ತಮ್ಮ ಮೊಬೈಲ್ ನಂಬರ್ ನೀಡಬೇಕು. ಆಗ ಆ ಗ್ಯಾಸ್ ಏಜೆನ್ಸಿಯು ಅಡುಗೆ ಗ್ಯಾಸ್ ಸಿಲಿಂಡರ್ ಗ್ರಾಹಕರ ಮೊಬೈಲ್ ನಂಬರ್ ಗೆ OTP ಅನ್ನು SMS ಕಳಿಸುತ್ತದೆ. ಡೆಲಿವರಿ ಬಾಯ್ ಗ್ರಾಹಕರ ಮನೆಗೆ ಬಂದಾಗ ಆತನಿಗೆ ಕಡ್ಡಾಯವಾಗಿ ಮೊಬೈಲ್ ಗೆ SMS ಮೂಲಕ ಬಂದಿರುವ OTP ಹೇಳಬೇಕು. ಆಗ OTP ಸರಿ ಇದ್ದರೆ ಮಾತ್ರ ಡೆಲಿವರಿ ಬಾಯ್ ಗ್ರಾಹಕರಿಗೆ ಅಡುಗೆ ಸಿಲಿಂಡರ್ ಕೊಡುತ್ತಾನೆ‌. OTP ತಪ್ಪು ಹೇಳಿದರೆ ಡೆಲಿವರಿ ಬಾಯ್ ಅಡುಗೆ ಗ್ಯಾಸ್ ಸಿಲಿಂಡರ್ ಯಾವುದೇ ಕಾರಣಕ್ಕೂ ಕೊಡದೆ ವಾಪಾಸ್ ಗ್ಯಾಸ್ ಏಜೆನ್ಸಿಗೆ ಕೊಡುತ್ತಾನೆ.
ಆದರೆ ಅಡುಗೆ ಗ್ಯಾಸ್ ಸಿಲಿಂಡರ್ ಪಡೆಯಲಿಚ್ಛಿಸುವ ಗ್ರಾಹಕರು ಸರಿಯಾಗಿ ನೋಂದಣಿ ಮಾಡಿಸಿಕೊಳ್ಳದಿದ್ದರೆ ಅಥವಾ ತಮ್ಮ ಮನೆ/ವಾಸದ ಸ್ಥಳದ ವಿಳಾಸವನ್ನು ತಪ್ಪಾಗಿ ನೀಡಿದರೆ ತೊಂದರೆಯಾಗುತ್ತದೆ. ಆದರೆ ಆಗ ಡೆಲಿವರಿ ಬಾಯ್ ಮೊಬೈಲ್ ನಂಬರನ್ನು ಅಪ್ ಡೇಟ್ ಮಾಡಿಕೊಡುತ್ತಾನೆ ಎಂದು ಹೇಳಲಾಗಿದೆ.
ಅಡುಗೆ ಗ್ಯಾಸ್ ಸಿಲಿಂಡರ್ ಗಳನ್ನು ಕಳ್ಳತನ ಮಾಡುವುದು ಅಥವಾ ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಈ ಹೊಸ OTP ಆಧಾರಿತ NAC ಅನ್ನು ಜಾರಿಗೆ ತರಲಾಗುತ್ತಿದೆ.
ಈಗಾಗಲೇ ರಾಜಸ್ತಾನದ ಜೈಪುರದಲ್ಲಿ ಈ NAC ಸಂಪೂರ್ಣವಾಗಿ ಯಶಸ್ವಿಯಾಗಿದೆ.
ಹಾಗಾಗಿ ಪ್ರಾಯೋಗಿಕವಾಗಿ ಈಗ ದೇಶದ 100 ಸ್ಮಾರ್ಟ್ ಸಿಟಿಗಳಲ್ಲಿ OTP ಆಧಾರಿತ NAC ಅನ್ನು ಕೇವಲ ಅಡುಗೆ ಗ್ಯಾಸ್ ಸಿಲಿಂಡರ್ ಗಳಿಗೆ ಮಾತ್ರ ಜಾರಿಗೆ ತರಲಾಗುತ್ತಿದೆ.
ಆದರೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗಳನ್ನು ಹಳೆಯ ನಿಯಮದಂತೆ ಪಡೆಯಬಹುದು.
ಒಂದು ವೇಳೆ ಈ OTP ಆಧಾರಿತ NAC ದೇಶದ ಸ್ಮಾರ್ಟ್ ಸಿಟಿಗಳಲ್ಲಿ ಯಶಸ್ವಿಯಾದರೆ ಆಗ ದೇಶದ ನಗರ,ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೂ ಈ OTP ಆಧಾರಿತ NAC ಜಾರಿಗೆ ಬರಲಿದೆ.
ಕೆ ಟಿವಿ ನ್ಯೂಸ್ ನವದೆಹಲಿ

Add Comment