ಡಿವಿಲಿಯರ್ಸ್ ಅಜೇಯ ಸ್ಫೋಟಕ ಬ್ಯಾಟಿಂಗ್-RCBಗೆ 6ನೇ ಜಯ

ಭಾರತದಲ್ಲಿ ಕೊರೊನಾ ಸೋಂಕಿನಲ್ಲಿ ವಿಶ್ವದ 2ನೇ ದೇಶವಾಗಿರುವ ಕಾರಣ ಯುಎಇ ದೇಶದಲ್ಲಿ ನಡೆಯುತ್ತಿರುವ 2020ನೇ ವರ್ಷದ ಐಪಿಎಲ್ ಟಿ-20 ಕ್ರಿಕೆಟ್ ಲೀಗ್ ನ ಇಂದಿನ ಮೊದಲ ಪಂದ್ಯ RCB ಮತ್ತು RR ತಂಡಗಳ ನಡುವೆ ಆರಂಭವಾಯಿತು.
ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ರಾಜಸ್ತಾನ್ ರಾಯಲ್ಸ್ ನಾಯಕ ಸ್ಟೀವನ್ ಸ್ಮಿತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು.
ಆದರೆ ಆರಂಭದಲ್ಲೇ ಓಪನರ್ ಬೆನ್ ಸ್ಟೋಕ್ಸ್ (15 ರನ್)ಮತ್ತು ಸ್ಯಾಮ್ಸನ್ (9 ರನ್) ವಿಕೆಟ್ ಕಳೆದುಕೊಂಡ ರಾಯಲ್ಸ್ ಗೆ ಬಳಿಕ ಕರ್ನಾಟಕದ ಓಪನರ್ ರಾಬಿನ್ ಉತ್ತಪ್ಪ 41(24 ಎಸೆತ), ನಾಯಕ ಸ್ಟೀವನ್ ಸ್ಮಿತ್ 56(36 ಎಸೆತ), ಜೋಸ್ ಬಟ್ಲರ್ 24(25 ಎಸೆತ) ಹಾಗೂ ರಾಹುಲ್ ತೆವಾಟಿಯ ಅಜೇಯ 19(11 ಎಸೆತ) ರನ್ ಮೂಲಕ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಕಲೆ ಹಾಕಿತು.
RCB ಪರ ಕ್ರಿಸ್ ಮೊರಿಸ್ 4 ಓವರ್ ಗಳಲ್ಲಿ 24 ರನ್ ನೀಡಿ 4 ವಿಕೆಟ್ ಕಿತ್ತು ಸೂಪರ್ ಹಿಟ್ ಬೌಲರ್ ಎನಿಸಿದರು.
ಸ್ಪಿನ್ನರ್ ಯಜುವೇಂದ್ರ ಚಾಹಲ್ ಸಹ 4 ಓವರ್ ಗೆ 34 ರನ್ ನೀಡಿದರೂ 2 ವಿಕೆಟ್ ಪಡೆದರು.
ಬಳಿಕ RCB ಬ್ಯಾಟಿಂಗ್ ಆರಂಭಿಸಿ ರನ್ ಗಳಿಸುತ್ತಿದ್ದಾಗ ಓಪನರ್ ಆ್ಯರೋನ್ ಫಿಂಚ್ 14(11 ಎಸೆತ) ರನ್ ಗಳಿಸಿ ಔಟಾದರು.ಆದರೆ ಮತ್ತೊಬ್ಬ ಓಪನರ್ ರಾಜ್ಯದ ದೇವದತ್ ಪಡಿಕ್ಕಲ್ ಅವರು ನಾಯಕ ಕೊಹ್ಲಿ ಜೊತೆ ಉತ್ತಮ ಜೊತೆಯಾಟ ನೀಡಿದರು. ಆದರೆ 35 ರನ್ (37 ಎಸೆತ) ಗಳಿಸಿದ್ದ ಪಡಿಕ್ಕಲ್ ವಿಕೆಟ್ ಪತನವಾದ ಕೆಲ ಬಾಲ್ ಗಳ ಬಳಿಕ ನಾಯಕ ಕೊಹ್ಲಿ ಸಹ 43 ರನ್(32 ಎಸೆತ) ಗಳಿಸಿ ಔಟಾದರು.
ಆಗ ಸ್ಕೋರ್ 102/3(13.1 ಓವರ್) ಆಗಿತ್ತು.
ಆದರೆ ಹೊಸ ಆಟಗಾರ ಗುರುಕೀರತ್ ಸಿಂಗ್ ಮನ್ ಜೊತೆ ಎಬಿ ಡಿವಿಲಿಯರ್ಸ್ ಆತಂಕ ಪಡದೆ ನಿಧಾನವಾಗಿ ಆಟ ಆರಂಭಿಸಿ ಆಮೇಲೆ ಬಾರಿಸಿ ಆಡಲು ಆರಂಭಿಸಿದರು. ಇಷ್ಟಾದರೂ RCB ಕಡೆಯ 2 ಓವರ್ ಗಳಲ್ಲಿ 35 ರನ್ ಗಳಿಸುವ ಕಠಿಣ ಗುರಿ ಹೊಂದಿತ್ತು. ಆದರೆ 19ನೇ ಓವರ್ ನಲ್ಲಿ ಡಿವಿಲಿಯರ್ಸ್ ಮೊದಲ 3 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು‌. ಹೀಗಾಗಿ 19ನೇ ಓವರ್ ನಲ್ಲಿ 25 ರನ್ ಬಂತು. ಕಡೆಯ ಓವರ್ ನಲ್ಲಿ RCB 10 ರನ್ ಗಳಿಸಬೇಕಿದ್ದಾಗ ಮೊದಲ 3 ಎಸೆತಗಳಲ್ಲಿ 5 ರನ್ ಬಂತು.
4ನೇ ಎಸೆತದಲ್ಲಿ ಡಿವಿಲಿಯರ್ಸ್ ಸೀದಾ ಸಿಕ್ಸರ್ ಹೊಡೆದು RCB ಗೆ 7 ವಿಕೆಟ್ ಗಳ ಜಯ ತಂದರು.
ಒಟ್ಟಾರೆ ಎಬಿ ಡಿವಿಲಿಯರ್ಸ್ ಅಜೇಯ 55 ರನ್(22 ಎಸೆತ, 1 ಬೌಂಡರಿ, 6 ಸಿಕ್ಸರ್) ಹಾಗೂ ಗುರುಕೀರತ್ ಸಿಂಗ್ ಅಜೇಯ 19(17 ಎಸೆತ) ರನ್ ಗಳಿಸಿ RCB ತಂಡಕ್ಕೆ 6ನೇ ಗೆಲುವು ತಂದರು.
ಕೊನೆಯಲ್ಲಿ ಈ ಬಾರಿ ಭಾರಿ ಬ್ಯಾಟಿಂಗ್ ನಡೆಸಿ ಅಜೇಯರಾಗಿ RCB ತಂಡದ 9ನೇ ಪಂದ್ಯದಲ್ಲಿ 6ನೇ ಜಯ ತಂದ ಕಾರಣ ಎಬಿ ಡಿವಿಲಿಯರ್ಸ್ ಸಹಜವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.
ಅಷ್ಟೇ ಅಲ್ಲ ಈವರೆಗ ಐಪಿಎಲ್ ನಲ್ಲಿ 25ಕ್ಕಿಂತ ಕಡಿಮೆ ಎಸೆತಗಳಲ್ಲಿ 8 ಅರ್ಧಶತಕ ಗಳಿಸಿದ ಬ್ಯಾಟ್ಸ್ ಮನ್ ಎಂಬ
ಗೌರವವನ್ನು ಡೇವಿಡ್ ವಾರ್ನರ್ ಜೊತೆ ಹಂಚಿಕೊಂಡಿದ್ದಾರೆ.
ಅದೇ ರೀತಿ ಐಪಿಎಲ್ ಟೂರ್ನಿಯಲ್ಲಿ ಈವರೆಗೆ 3 ಸಾವಿರ ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಕೀರ್ತಿಗೂ ಡಿವಿಲಿಯರ್ಸ್ ಪಾತ್ರರಾದರು.
ಆದರೆ 9 ಪಂದ್ಯಗಳಲ್ಲಿ 3 ಜಯ,6 ಸೋಲು ಕಂಡ ಕಾರಣ ರಾಜಸ್ತಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಇನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ 9 ಪಂದ್ಯಗಳಲ್ಲಿ 6 ಗೆಲುವು,3 ಸೋಲು ಕಂಡು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಉಳಿದು ಸೆಮಿಫೈನಲ್ ನತ್ತ ಹೆಜ್ಜೆ ಹಾಕಿದೆ.
ಕೆ ಟಿವಿ ನ್ಯೂಸ್ ದುಬೈ

Add Comment