ಮೋದಿಯ 5 ವರ್ಷದ ಪರಿಶ್ರಮ ಮಣ್ಣುಪಾಲು ಮಾಡಿದ್ರಾ ಕಟೀಲ್ , ಸಾಧ್ವಿ ?

ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಬಿಜೆಪಿ ಹೈಕಮಾಂಡ್ ಸಿಕ್ಕಾಪಟ್ಟೆ ಗರಂ ಆಗಿದೆ. ಅಮಿತ್ ಶಾ ಅಂತೂ ಕೆಂಡಾಮಂಡಲರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಂತೂ ಮಾತನಾಡಲಿಕ್ಕೂ ರೆಡಿ ಇಲ್ಲ. ಅಷ್ಟಕ್ಕೂ ಬೆಸ್ಟ್ ವರ್ಕರ್ ಅಂತ ಗುರುತಿಸಿಕೊಂಡಿದ್ದ ಮಂಗಳೂರು ಸಂಸದನ ಮೇಲೆ ಹೈಕಮಾಂಡ್​ ಸಿಟ್ಟಾಗಲು ಕಾರಣ ಏನು ಗೊತ್ತಾ ? ಹೇಳ್ತೀವಿ ಕೇಳಿ.

ಮೋದಿ ಪ್ರಧಾನಿಯಾಗ್ತಿದ್ದಂತೆ ಮಾಡಿದ ಮೊದಲ ಕೆಲಸವೇ, ರಾಷ್ಟ್ರನಾಯಕರನ್ನು ಕಾಂಗ್ರೆಸ್ ಜೋಳಿಗೆಯಿಂದ ಹೊರತಂದು, ಎಲ್ಲರ ಸ್ವತ್ತು ಮಾಡಿದ್ದು. ಅದರಲ್ಲೂ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಎಲ್ಲರ ನಾಯಕರನ್ನಾಗಿ ಮೋದಿ ಮಾಡಿದ್ದರು. ಗಾಂಧಿ ಜಯಂತಿಯಂದು ಸ್ವಚ್ಛಭಾರತ್ ಯೋಜನೆ ಘೋಷಿಸಿ, ಖುದ್ದು ತಾವೇ ಪೊರಕೆ ಹಿಡಿದು ಬೀದಿಗೆ ಇಳಿದಿದ್ದರು. ಸ್ವಚ್ಛ ಭಾರತ ಗಾಂಧಿಯ ಕನಸು. ಅದನ್ನು ಈಡೇರಿಸುವುದು ನನ್ನ ಧರ್ಮ ಎಂದು ಮೋದಿ ಘೋಷಿಸಿದ್ದರು. ಅಲ್ಲಿವರೆಗೆ ಗಾಂಧಿ ಹೆಸರಲ್ಲಿ ಮತ ಕೇಳ್ತಿದ್ದ ಕಾಂಗ್ರೆಸ್​ಗೆ ಮರ್ಮಾಘಾತ ನೀಡಿದ್ದರು. ರಾಷ್ಟ್ರಪಿತನಿಗೆ ಸಲ್ಲಬೇಕಾದ ಗೌರವವನ್ನು ಮೋದಿ ಸಲ್ಲಿಸಿಬಿಟ್ಟಿದ್ದರು.

ಇಷ್ಟೆಲ್ಲಾ ಕಷ್ಟಬಿದ್ದು, ಕಾಂಗ್ರೆಸ್​ಗೆ ಸೀಮಿತವಾಗಿದ್ದ ಗಾಂಧಿ ಬ್ರ್ಯಾಂಡ್​ನ್ನು ದೇಶದ ಬ್ರ್ಯಾಂಡ್ ಮಾಡಿದ್ದರು ಮೋದಿ. ದೇಶದ ವಿಚಾರಕ್ಕೆ ಬಂದರೆ, ತಾವು ಪಕ್ಷ ಮೀರಿದ ವ್ಯಕ್ತಿತ್ವವನ್ನು ಬೆಂಬಲಿಸುವುದಾಗಿ ಮೋದಿ ಈ ಮೂಲಕ ಇಡೀ ದೇಶಕ್ಕೆ ಸಾರಿದ್ದರು. ಆದರೆ, ಮೋದಿಯ 5 ವರ್ಷಗಳ ಆ ಕಠಿಣ ಪರಿಶ್ರಮವನ್ನು ನಳಿನ್ ಕುಮಾರ್ ಕಟೀಲ್ ಒಂದೇ ದಿನದಲ್ಲಿ ಮಣ್ಣು ಪಾಲು ಮಾಡಿದ್ದಾರೆ ಎಂಬ ಮಾತುಗಳು ಬಿಜೆಪಿ ಹೈಕಮಾಂಡ್ ವಲಯದಲ್ಲಿ ಕೇಳಿ ಬರ್ತಿವೆ.

ಹೌದು, ಇವತ್ತು ಬೆಳಗ್ಗೆ ಟ್ವೀಟ್ ಮಾಡಿದ್ದ ಕಟೀಲ್, ಗೋಡ್ಸೆಯನ್ನು ಬೆಂಬಲಿಸುವ ಭರದಲ್ಲಿ ಗಾಂಧಿ ಹಂತಕನನ್ನು ಸಮರ್ಥಿಸಿಕೊಂಡಿದ್ದರು. ಇದೇ ಮೋದಿ ಮತ್ತು ಶಾ ಜೋಡಿಯ ಸಿಟ್ಟಿಗೆ ಕಾರಣ. ಬಿಜೆಪಿಯ ಹತ್ತಿರಕ್ಕೆ ಗಾಂಧಿಯನ್ನು ಮೋದಿ ಸೆಳೆದು ತಂದಿದ್ದರು. ಆದರೆ, ಕಟೀಲ್ ಆದಿಯಾಗಿ ಬಿಜೆಪಿಯ ಕೆಲ ನಾಯಕರು ಕೆಲವೇ ಟ್ವೀಟ್​ ಗಳಲ್ಲಿ ಗಾಂಧಿಯನ್ನು ಮತ್ತೆ ಕಾಂಗ್ರೆಸ್ ಜಹಾಗೀರು ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೈಕಮಾಂಡ್​ ಸಿಟ್ಟಿಗೆದ್ದಿದೆಯಂತೆ. ಪರಿಣಾಮ ಕಠಿಣ ಕ್ರಮ ಕೈಗೊಳ್ಳುವಂತೆ ಅಮಿತ್ ಶಾ ಪಕ್ಷದ ಶಿಸ್ತು ಸಮಿತಿಗೆ ಹೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಅತ್ತ ಇಡೀ ಪ್ರಕರಣವನ್ನು ಕೆದಕಿದ ಸಾಧ್ವಿ ಪ್ರಜ್ಯಾ ಸಿಂಗ್​​ರನ್ನು ಯಾವ ಕಾರಣಕ್ಕೂ ಕ್ಷಮಿಸಲ್ಲ ಅಂತ ಮೋದಿ ಗುಡುಗಿದ್ದಾರೆ. ಬಿಜೆಪಿಯ ಡಿಸಿಷನ್ ಮೇಕರ್ ಗಳ ಸಿಟ್ಟು ಮುಂದೇನ್ ಮಾಡುತ್ತೋ ಗೊತ್ತಿಲ್ಲ.

Add Comment