ಎಕ್ಸಿಟ್ ರಿಸಲ್ಟ್ ಬೆನ್ನಲ್ಲೆ ಟ್ರಬಲ್ ಶೂಟರ್ ಎಸ್ಕೇಪ್ – ಕುಮಾರಸ್ವಾಮಿಗೆ ಫುಲ್ ಟೆನ್ಷನ್ !

ಬೆಂಗಳೂರು : ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಕ್ಕೆ ಇನ್ನೆರಡು ದಿನವಷ್ಟೇ ಬಾಕಿ ಉಳಿದಿದ್ದು, ಎಲ್ಲೆಡೆ ಭಾರೀ ಕುತೂಹಲ ಕೆರಳಿಸಿದೆ. ಬಹುತೇಕ ಸಮೀಕ್ಷೆಗಳು ದಿಲ್ಲಿಯಲ್ಲಿ ಮೋದಿ ಪರ್ವ ಮುಂದುವರಿಯುತ್ತದೆ ಎಂದು ಭವಿಷ್ಯ ನುಡಿದಿವೆ. ರಾಜ್ಯದಲ್ಲೂ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಗಳನ್ನು ಬಿಚ್ಚಿಟ್ಟಿವೆ. ಹಾಗೊಂದು ವೇಳೆ ಬಿಜೆಪಿ 20 ಸ್ಥಾನ ಗೆದ್ದಲ್ಲಿ, ಮೈತ್ರಿ ಸರಕಾರದ ಆಯಸ್ಸು ಮುಗಿದಂತೆಯೇ ಸರಿ. ಆಪರೇಷನ್ ಸ್ಟಾರ್ಟ್ ಆದಾಗಲೆಲ್ಲಾ ಸರಕಾರದ ಮಾನ ಮರ್ಯಾದೆ ಉಳಿಸುತ್ತಿದ್ದ ಡಿಕೆಶಿ, ಈ ಬಾರಿ ಯಾಕೋ ಜವಬ್ದಾರಿಯಿಂದ ನುಣುಚಿಕೊಂಡಂತಿದೆ.

ಮೈತ್ರಿ ಸರಕಾರ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿಯೇ, ರಾಜ್ಯದ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಸಚಿವ ಡಿ.ಕೆ. ಶಿವಕುಮಾರ್ ಕೂಡಾ ಕೈಕೊಟ್ಟಂಗಿದೆ. ಅವರೀಗ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಚುನಾವಣೆ ಫಲಿತಾಂಶ ದಿನದಂದೂ ಡಿ.ಕೆ. ಶಿವಕುಮಾರ್ ವಿದೇಶದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಚುನಾವಣೆ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದು, ಆದರೆ ಈ ಸಂದರ್ಭದಲ್ಲಿ ರಾಜ್ಯದಲ್ಲಿರದೇ ಡಿಕೆಶಿ ವಿದೇಶದಲ್ಲಿರುವುದು ಶಾಸಕರನ್ನು ಉಳಿಸಿಕೊಳ್ಳುವ ಯತ್ನದಿಂದ ದೂರ ಉಳಿದರಾ ಎನ್ನುವ ಪ್ರಶ್ನೆ ಮೂಡಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾಹಿತಿ ನೀಡಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಕುಟುಂಬಸ್ಥರೊಂದಿಗೆ ತೆರಳಿದ್ದು, ಇದರ ಹಿಂದಿನ ಉದ್ದೇಶವೇನು ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇತ್ತ ಎಕ್ಸಿಟ್ ಪೋಲ್ ಬಳಿಕ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಆಗಮಿಸಿದ್ದು, ಡಿಕೆಶಿ ಸಂಪರ್ಕದಲ್ಲಿ ಇದ್ದ ನಾಗೇಂದ್ರ, ಕುಮಟಳ್ಳಿ ಅವರನ್ನ ಮತ್ತೆ ಸೆಳೆಯುವ ಪ್ರಯತ್ನ ಮಾಡುತ್ತಾರೆ ಎನ್ನಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆಪದ್ಭಾಂಧವ ಡಿಕೆಶಿಯ ಅನಿವಾರ್ಯತೆ ಮೈತ್ರಿ ಸರಕಾರಕ್ಕೆ ಭಾರೀ ಕಾಡಲಿದೆ.

Add Comment