ಆರ್ನಾಬ್ ಗೋಸ್ವಾಮಿ ಕಾಲೆಳೆದಿದ್ದೇಕೆ ಆ ಕಾಂಡೋಮ್ ಕಂಪನಿ?

 ರಾಷ್ಟ್ರೀಯ ಸುದ್ದಿ ವಾಹಿನಿ ನಿರೂಪಕ ಆರ್ನಾಬ್ ಗೋಸ್ವಾಮೀ ಈಗ ಸಿಕ್ಕಾಪಟ್ಟೆ ಟ್ರಾಲ್​ಗೆ ಒಳಗಾಗಿದ್ದಾರೆ.  ಚುನಾವಣಾ ಫಲಿತಾಂಶದಂದು ನಟ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಹೆಸರು ಹೇಳಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಸನ್ನಿ ಲಿಯೋನ್ ಹೆಸರು ಹೇಳಿದ್ದಕ್ಕೆ ಕಾಂಡೋಮ್ ಕಂಪನಿ ನಿರೂಪಕರ ಕಾಲೆಳೆದಿದೆ.

ನಿರೂಪಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮ್ಯಾನ್ಫೋರ್ಸ್ ಕಂಪನಿ, “ಡಿಯರ್ ಅರ್ನಬ್, ನಾವು ಅರ್ಥ ಮಾಡಿಕೊಳ್ಳುತ್ತೇವೆ. ಸನ್ನಿ ನಮ್ಮ ಮನಸ್ಸಿನಲ್ಲೂ ಯಾವಾಗಲೂ ಇರುತ್ತಾರೆಎಂದು ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಕಾಂಡೋಮ್ ಕಂಪನಿ ಟ್ವೀಟ್ನಿಂದ ನಿರೂಪಕ ಮತ್ತಷ್ಟು ಟ್ರೋಲ್ ಆಗುತ್ತಿದ್ದಾರೆ.

ವೈರಲ್ ವಿಡಿಯೋ ಬಗ್ಗೆ ಸನ್ನಿ ಲಿಯೋನ್ ಕೂಡ ಪ್ರತಿಕ್ರಿಯಿಸಿದ್ದರು. ಸನ್ನಿ ಲಿಯೋನ್ ತಮ್ಮ ಟ್ವಿಟ್ಟರಿನಲ್ಲಿ, “ನಾನು ಎಷ್ಟು ಮತಗಳಿಂದ ಮುನ್ನಡೆಯಲ್ಲಿ ಇದ್ದೇನೆ?” ಎಂದು ಟ್ವೀಟ್ ಮಾಡಿ ನಿರೂಪಕನ ಕಾಲೇಳೆದಿದ್ದರು. ಸನ್ನಿ ಲಿಯೋನ್ ಪ್ರತಿಕ್ರಿಯೆಗೆ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ರೀಟ್ವೀಟ್ ಮಾಡಿದ್ದರು.

ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್ ಗುರ್ದಾಸ್ಪುರದಲ್ಲಿ ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸನ್ನಿ ಡಿಯೋಲ್ ಚುನಾವಣೆಯಲ್ಲಿ 82,459 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸನ್ನಿ ಡಿಯೋಲ್ ಅವರು ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಕಾ ವಿರುದ್ಧ ಸ್ಪರ್ಧಿಸಿದ್ದರು.

Add Comment