ಬಿಜೆಪಿಗೆ ಕರ್ನಾಟಕದಲ್ಲಿ ಒಂದು ಎಕ್ಸ್ಟ್ರಾ ಸೀಟು –  ನಾಳೆ ಬಿಜೆಪಿಗೆ ಸುಮಲತಾ ?

ಮಂಡ್ಯದಲ್ಲಿ ಗೆದ್ದು ಇಂಡಿಯಾದ ಗಮನ ಸೆಳೆದಿರೋ ಸುಮಲತಾ ಅಂಬರೀಶ್ ಬಿಜೆಪಿ ಸೇರ್ತಾರಾ ? ಇಂತಹದ್ದೊಂದು ಪ್ರಶ್ನೆ ಒಡಾಡ್ತಾನೇ ಇದೆ., ಆದರೆ, ನಾಳೆ ಬೆಳಗ್ಗೆ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಭೇಟಿ ಮಾಡುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  ನಾಳೆ ಬೆಳಗ್ಗೆ ಸುಮಲತಾ ಯಡಿಯೂರಪ್ಪನವರನ್ನು ಡಾಲರ್ಸ್ ಕಾಲನಿ ನಿವಾಸದಲ್ಲಿ ಭೇಟಿಯಾಗಲಿದ್ದಾರೆ. ಬೆಂಬಲಿಸಿ ಗೆಲ್ಲಿಸಿದ್ದಕ್ಕೆ ಅವರು ಯಡಿಯೂರಪ್ಪ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಱತೆ ಸಲ್ಲಿಸಲಿದ್ದಾರೆ.

 

ಬಳಿಕ, ಮಾಜಿ ಸಿಎಂ ಎಸ್ಎಂಕೆ ಭೇಟಿ ಮಾಡಲಿರುವ ಯಡಿಯೂರಪ್ಪ, ಆರ್ ಅಶೋಕ್ ಜೊತೆಗೆ ಸುಮಲತಾ ಕೂಡಾ ಪ್ರಯಾಣಿಸಲಿದ್ದಾರೆ.  ಸದಾಶಿವನಗರದ ಎಸ್ ಎಂ ಕೃಷ್ಣಾ ನಿವಾಸದಲ್ಲಿ ಬೆಳಗ್ಗೆ ೧೧ಕ್ಕೆ ಭೇಟಿ ನಿಗದಿಯಾಗಿದೆ. ಸಧ್ಯ ದೆಹಲಿಯಲ್ಲಿರುವ ಎಸ್ ಎಂ ಕೃಷ್ಣ ರಾತ್ರಿ ಬೆಂಗಳೂರಿಗೆ ಬರಲಿದ್ದಾರೆ  ಮಾಜಿ ಡಿಸಿಎಂ ಆರ್. ಅಶೋಕ್ ಉಪಸ್ಥಿತಿಯಲ್ಲಿ ಸುಮಲತಾ ಭೇಟಿ ಉಭಯ ನಾಯಕರನ್ನು ಭೇಟಿ ಮಾಡಲಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕೃಷ್ಣ ಸೂಚನೆಯಂತೆ ಬಿಜೆಪಿ ಮಂಢ್ಯದಲ್ಲಿ ಸುಮಲತಾಗೆ ಬೆಂಬಲ ಘೋಷಿಸಿತ್ತು. ಇದೀಗ ಕೃಷ್ಣ ನಿವಾಸದಲ್ಲೇ ಎಲ್ಲರೂ ಸಭೆ ಸೇರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

Add Comment