ಬಂಡೀಪುರದಲ್ಲಿ ಮುಧೋಳ ನಾಯಿಮರಿಗಳಿಗೆ ಸ್ವಾಗತ

ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚುವುದಕ್ಕಾಗಿ ಬಂಡೀಪುರ ಅರಣ್ಯ ಇಲಾಖೆಯು ಮುಧೋಳ ತಳಿಯ ಎರಡು ನಾಯಿ ಮರಿಗಳನ್ನು ಖರೀದಿಸಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀಪದ ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರದಿಂದ ಒಂದು ತಿಂಗಳಿನ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಯನ್ನು 5 ದಿನಗಳ ಹಿಂದೆ ತರಲಾಗಿದೆ. 2015ರಿಂದ ಅರಣ್ಯ ಅಪರಾಧ ಪತ್ತೆಯಲ್ಲಿ ತೊಡಗಿರುವ ರಾಣಾ ಎಂಬ ಜರ್ಮನ್ ಶೆಫರ್ಡ್ ತಳಿಯ ಶ್ವಾನವು ನಿವೃತ್ತಿ ಅಂಚಿನಲ್ಲಿರುವುದರಿಂದ, ಅದರ ಸ್ಥಾನಕ್ಕೆ ಈ ಎರಡು ಮುಧೋಳ ನಾಯಿಯಳನ್ನು ತರಲಾಗಿದೆ.

Add Comment