ಡ್ರಗ್ಸ್ ಪೆಡ್ಲರ್ ಆ್ಯಡಂ ಪಾಷಾಗೆ ನ.3 ರವರೆಗೆ ನ್ಯಾಯಾಂಗ ಬಂಧನ

ಡ್ರಗ್ಸ್ ಪ್ರಕರಣದಲ್ಲಿ‌ ಎನ್.ಸಿ.ಬಿ ಅಧಿಕಾರಿಗಳು ಬಂಧಿಸಿರುವ ಡ್ರಗ್ಸ್ ಪೆಡ್ಲರ್ ಆ್ಯಡಂ ಪಾಷಾನನ್ನು ನವೆಂಬರ್ 3 ರವರೆಗೆ ನ್ಯಾಯಾಂಗ ಬಂಧನಕ್ಕೆ ಬೆಂಗಳೂರಿನ NDPS ಕೋರ್ಟ್ ಆದೇಶಿಸಿದೆ.‌‌
ಈ ಬಗ್ಗೆ ಇಂದು ನಡೆದ ವಿಚಾರಣೆಯಲ್ಲಿ ವಾದ-ಪ್ರತಿವಾದ ಆಲಿಸಿದ NDPS ಕೋರ್ಟ್ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ ಡ್ರಗ್ಸ್ ಪೆಡ್ಲರ್ ಆ್ಯಡಂ ಪಾಷಾನನ್ನು ನವೆಂಬರ್ 3 ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.
ಡ್ರಗ್ಸ್ ಪೆಡ್ಲರ್ ಆ್ಯಡಂ ಪಾಷಾ ಬಂಧಿತೆ ಡ್ರಗ್ಸ್ ಪೆಡ್ಲರ್ ಅನಿಕಾ ಬಳಿ ಡ್ರಗ್ಸ್ ಖರೀದಿಸಿ ಮಾರಾಟ ಮಾಡುತ್ತಿದ್ದ ಎಂದು ಎನ್.ಸಿ.ಬಿ ಅಧಿಕಾರಿಗಳು ಶಂಕಿಸಿದ್ದಾರೆ
ಕೆ ಟಿವಿ ನ್ಯೂಸ್ ಬೆಂಗಳೂರು

Add Comment