ಐಪಿಎಲ್-20: ಕೆಕೆಆರ್ ವಿರುದ್ಧ ಸುಲಭ ಜಯ ಸಾಧಿಸಿದ RCBಗೆ ಖಚಿತವಾಯ್ತು ಪ್ಲೇಆಫ್ ಸ್ಥಾನ

ಯುಎಇ ದೇಶದಲ್ಲಿ ನಡೆಯುತ್ತಿರುವ ಐಪಿಎಲ್-20 ಟೂರ್ನಿಯ
ಬುಧವಾರದ ಅಬುಧಾಬಿಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಲ್ಕತಾ ನೈಡ್ ರೈಡರ್ಸ್ ತಂಡವನ್ನು 8 ವಿಕೆಟ್ ಗಳ ಸುಲಭ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಈ ಬಾರಿಯ ಟೂರ್ನಿಯಲ್ಲೇ ಅತಿ ಕಡಿಮೆ ಎನ್ನಬಹುದಾದ 84 ರನ್ ಗಳಿಸಿತು. ನಾಯಕ ಇಯಾನ್ ಮಾರ್ಗನ್ 30 ರನ್ ಗಳಿಸಿದ್ದೇ ಕೆಕೆಆರ್ ಬ್ಯಾಟ್ಸ್ ಮನ್ ನ ಗರಿಷ್ಠ ಸ್ಕೋರ್ ಆಗಿತ್ತು.‌
ಇದಕ್ಕೆ RCBಯ ವೇಗಿ ಮೊಹಮ್ನದ್ ಸಿರಾಜ್ 4 ಓವರ್ ಬೌಲ್ ಮಾಡಿ 3 ವಿಕೆಟ್ ಕಿತ್ತದ್ದು ಹಾಗೂ ಸ್ಪಿನ್ನರ್ ಯಜುವೇಂದ್ರ ಚಾಹಲ್ 2 ವಿಕೆಟ್ ಪಡೆದದ್ದು ಪ್ರಮುಖ ಕಾರಣವಾಯ್ತು. ಜೊತೆಗೆ ವಾಷಿಂಗ್ಟನ್ ಸುಂದರ್ ಮತ್ತು ನವ್ ದೀಪ್ ಸೈನಿ ತಲಾ ಒಂದು ವಿಕೆಟ್ ಪಡೆದು ಕೆಕೆಆರ್ ಅನ್ನು
ನಿಯಂತ್ರಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ RCB ಓಪನರ್ ಗಳಾದ ದೇವದತ್ ಪಡಿಕ್ಕಲ್ ಮತ್ತು ಆ್ಯರೋನ್ ಫಿಂಚ್ ಕೇವಲ 5.2 ಓವರ್ ಗಳಲ್ಲೇ 46 ರನ್ ಗಳಿಸಿದರು. ಆದರೆ 16 ರನ್ ಗಳಿಸಿದ್ದ ಫಿಂಚ್ ಬೌಲ್ಡ್ ಆದರು. ಇದರ ಬೆನ್ನಹಿಂದೆಯೇ ಗುರುಕಿರತ್ ಅವರಿಂದಾಗಿ ಪಡಿಕ್ಕಲ್ ಕೂಡ 25 ರನ್ ಗಳಿಸಿ ರನೌಟ್ ಆದರು. ಆದರೆ ಬಳಿಕ ನಿಧಾನವಾಗಿ ಬ್ಯಾಟ್ ಮಾಡಿದ ಗುರುಕಿರತ್ ಸಿಂಗ್ ಅಜೇಯ 21 ರನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅಜೇಯ 18 ರನ್ ಗಳಿಸಿ RCB ತಂಡಕ್ಕೆ 13.3 ಓವರ್ ಗಳಲ್ಲೇ 7ನೇ ಜಯ ತಂದರು.
RCBಯ ಹೈದ್ರಾಬಾದ್ ನ ಯುವ ವೇಗಿ ಮೊಹಮ್ಮದ್ ಸಿರಾಜ್
ಮೊದಲ ಸ್ಪೆಲ್ ನಲ್ಲಿ ಬೌಲಿಂಗ್ ಮಾಡಿ KKRನ 3 ವಿಕೆಟ್ ಪಡೆದ ಕಾರಣ ಸಹಜವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಈ ಮೂಲಕ RCB 10 ಪಂದ್ಯಗಳಿಂದ 7
ಜಯ, 3 ಸೋಲು ಮೂಲಕ 14 ಪಾಯಿಂಟ್ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಅಲ್ಲದೆ RCB ಪ್ಲೇಆಪ್ ಪ್ರವೇಶಿಸುವುದು ಬಹುತೇಕ ಖಾತ್ರಿಯಾಯಿತು.
ಆದರೆ ಕೆಕೆಅರ್ 10 ಪಂದ್ಯಗಳಲ್ಲಿ 5 ಜಯ,5 ಸೋಲಿನ ಮೂಲಕ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಮುಂದುವರೆದಿದೆ.
ಕೆ ಟಿವಿ ನ್ಯೂಸ್ ಅಬುಧಾಬಿ

Add Comment