ಗಂಡು ಮಗುವಿಗೆ ಜನ್ಮ ನೀಡಿದ ದಿವಂಗತ ನಟ ಚಿರು ಪತ್ನಿ ಮೇಘನಾ ರಾಜ್

ಇತ್ತೀಚಿಗೆ ಅಕಾಲಿಕವಾಗಿ ನಿಧನರಾಗಿದ್ದ ಸ್ಯಾಂಡಲ್ ವುಡ್ ಸ್ಟಾರ್ ನಟ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರು ಬೆಂಗಳೂರಿನ ಅಕ್ಷ್ ಆಸ್ಪತ್ರೆಯಲ್ಲಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ದಿವಂಗತ ನಟ ಚಿರಂಜೀವಿ ಸರ್ಜಾ ಜೊತೆ ಮದುವೆ ನಿಶ್ಚಿತಾರ್ಥ ದಿನವಾದ 2017 ನೇ ವರ್ಷದ ಅಕ್ಟೋಬರ್ 22 ರಂದೇ ಪತ್ನಿ ಮೇಘನಾ ರಾಜ್ ಅವರು ಬೆಂಗಳೂರಿನ ಆಕ್ಷ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಇಂದು ಬೆಳಗ್ಗೆ ಸರಿಯಾಗಿ 11:07 ಕ್ಕೆ ಜ್ಯೂನಿಯರ್ ಚಿರಂಜೀವಿ ಸರ್ಜಾ ಜನ್ಮ ತಾಳಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಆದ್ದರಿಂದ ತಂದೆ ಹಿರಿಯ ನಟ ಸುಂದರ್ ರಾಜ್ ಮತ್ತು ತಾಯಿ ಹಿರಿಯ ನಟಿ ಪ್ರಮೀಳಾ ಜೋಷಾಯ್ ಅವರು ಆಕ್ಷ್ ಆಸ್ಪತ್ರೆಗೆ ಆಗಮಿಸಿ ಜ್ಯೂನಿಯರ್ ಚಿರು ನೋಡಿ ಮುದ್ದಾಡಿ ಆನಂದಿಸಿದರು. ಇದೇ ವೇಳೆ ಆಸ್ಪತ್ರೆ ಹೊರಗೆ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಅಭಿಮಾನಿಗಳು ಜ್ಯೂನಿಯರ್ ಚಿರಂಜೀವಿ ಸರ್ಜಾ ಇಂದು ಭೂಮಿಗಿಳಿದು ನಮಗಾಗಿ ಬಂದ ಎಂದು ಕುಣಿದಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈಗಾಗಲೇ ನಟ ಧ್ರುವ ಸರ್ಜಾ ಅವರು ಹುಟ್ಟಿ ಬರಲಿರುವ
ಅಣ್ಣನ ಮಗುವಿಗಾಗಿ ಮನೆಗೆ ಚಿನ್ನದ ತೊಟ್ಟಿಲು ತಂದಿದ್ದರು.
ಇದೇ ವೇಳೆ ಜ್ಯೂನಿಯರ್ ಚಿರಂಜೀವಿ ಸರ್ಜಾ ನೋಡಲು ಹಿರಿಯ ನಟ ಅರ್ಜುನ್ ಸರ್ಜಾ ಅವರು ಬೆಂಗಳೂರಿನ‌ ಆಕ್ಷ್ ಆಸ್ಪತ್ರೆಗೆ ಆಗಮಿಸುವ ನಿರೀಕ್ಷೆಯಿದೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment